ಹಂಟ್ಯಾರ್ ಶಾಲಾ ಮುಖ್ಯ ಶಿಕ್ಷಕಿಗೆ ವಿದಾಯ, ಸನ್ಮಾನ ಸಮಾರಂಭ

0

  • ಪ್ರಾಥಮಿಕ ಶಾಲೆಗಳು ವ್ಯಕ್ತಿಯ ಭವಿಷ್ಯ ರೂಪಿಸುವ   ಕೇಂದ್ರಗಳಾಗಿದೆ: ರಾಧಾಕೃಷ್ಣ ಬೋರ್ಕರ್

ಪುತ್ತೂರು: ಒಬ್ಬ ವ್ಯಕ್ತಿಯ ಭವಿಷ್ಯ ರೂಪುಗೊಳ್ಳುವುದು ಪ್ರಾಥಮಿಕ ಹಂತದಲ್ಲಿ, ಎಳೆಯ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲೇ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಈ ಕಾರಣಕ್ಕೆ ಪ್ರಾಥಮಿಕ ಶಾಲೆಗಳು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಿ ಮಾರ್ಪಟ್ಟಿದೆ ಎಂದು ಪುತ್ತೂರು ತಾಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

ಹಂಟ್ಯಾರ್ ಸಜಿಪಂಉ ಹಿಪ್ರಾ ಶಾಲೆಯಲ್ಲಿ ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕಿ ಜಾನಕಿ ಎಂ ರವರಿಗೆ ನಡೆದ ವಿದಾಯಕೂಟ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ನಾವು ನಮಗೆ ಶಿಕ್ಷಣದ ಅಡಿಗಲ್ಲು ಹಾಕಿದ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಶಿಕ್ಷಕರಾದವರು ಶಾಲೆಯ ಪೋಷಕರೊಂದಿಗೆ , ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಬೇಕು. ಶಾಲೆಗಳು ಸರ್ವ ಧರ್ಮಿಯವರ ಬಾಂಧವ್ಯಕೇಂದ್ರಗಳಾಗಿದೆ. ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು ಎಂದು ಹೇಳಿದ ಅವರು ಇಂದು ನಿವೃತ್ತರಾಗುತ್ತಿರುವ ಶಿಕ್ಷಕಿ ಹಂಟ್ಯಾರ್ ಶಾಲೆಯ ಅಭಿವೃದ್ದಿಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಪೋಷಕರ ಪ್ರೀತಿಯೇ ದೊಡ್ಡ ಗೌರವ-ತನುಜಾ: ಬಿಐಇಆರ್‌ಟಿ ತನುಜಾರವರು ಮಾತನಾಡಿ ಸರಕಾರಿ ಶಾಲೆಯೊಂದರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ ಎಂದು ಅವರಿಗೆ ಶಾಲೆಯ ಪೋಷಕರು, ಗ್ರಾಮಸ್ಥರು ಸನ್ಮಾನ ಮಾಡುತ್ತಿದ್ದಾರೆ ಎಂದರೆ ಅದು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಸಿಗುವ ದೊಡ್ಡ ಗೌರವವಾಗಿದೆ. ನಿವೃತ್ತಿ ಹೊಂದುವ ವೇಳೆ ನಾವು ಮಾಡಿದ ಸೇವೆಯನ್ನು ಜನ ಗುರುತಿಸಿದರೆ ಅದುವೇ ನಿವೃತ್ತಿ ಜೀವನದ ಗೌರವವಾಗಿದೆ ಎಂದು ಹೇಳಿದರು.


ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿಯವರು ಮಾತನಾಡಿ ನಿವೃತ್ತಿ ಹೊಂದುತ್ತಿರುವ ಮುಖ್ಯ ಶಿಕ್ಷಕಿ ಜಾನಕಿಯವರು ಶಾಲೆಯ ವಿದ್ಯಾರ್ಥಿಗಳ ಜೊತೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಶಾಲೆಯನ್ನು ತನ್ನ ಮನೆಯಂತೆ ಕಾಣುತ್ತಿದ್ದ ಅವರಿಗೆ ವಿದ್ಯಾರ್ಥಿಗಳೇ ಮಕ್ಕಳಂತಿದ್ದರು, ಇಂಥಹ ಶಿಕ್ಷಕಿಯನ್ನು ಪಡೆದ ಹಂಟ್ಯಾರ್ ಶಾಲೆಯ ಪೋಷಕರು ಧನ್ಯರು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಸುನಿತಾ ಶೆಟ್ಟಿ ಮಾತನಾಡಿ ಹಂಟ್ಯಾರ್ ಶಾಲೆಯ ಅಭಿವೃದ್ದಿಗೆ ಶಿಕ್ಷಕಿ ಜಾನಕಿಯವರು ಮುತುವರ್ಜಿವಹಿಸುತ್ತಿದ್ದರು. ಗ್ರಾಮೀಣಾಭಿವೃದ್ದಿ ಯೋಜನೆಯಿಂದ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದೆ. ಶಾಲೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಎಲ್ಲರಲ್ಲೂ ಪ್ರೀತಿ ತೋರಿಸುತ್ತಿದ್ದರು -ಬಾಬು: ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕಾದರೆ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಉತ್ತಮ ಶಿಕ್ಷಕರು ಬೇಕಾಗಿದೆ. ಹಂಟ್ಯಾರ್ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಜಾನಕಿಯವರು ಹಂಟ್ಯಾರ್ ಶಾಲೆಯನ್ನು ಬೆಳಗಿಸಿದವರು. ಶಿಕ್ಷಕರನ್ನು ದೇವರಂತೆ ಕಾಣುವ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮ: ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕಿ ಜಾನಕಿ ಎಂ ರವರಿಗೆ ಶಾಲಾ ಎಸ್‌ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕರು, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿದ್ಯಾರ್ಥಿಗಳು, ಪೋಷಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶಾಲಾ ಮಕ್ಕಳು ಸಾಲು ಸಾಲಾಗಿ ಬಂದು ತಮ್ಮ ನೆಚ್ಚಿನ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದರು.

ಕಣ್ಣೀರು ಹಾಕಿದ ವಿದ್ಯಾರ್ಥಿಗಳು, ಪೋಷಕರು: ತಮ್ಮ ನೆಚ್ಚಿನ ಶಿಕ್ಷಕಿ ಜಾನಕಿಯವರ ವಿದಾಯ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಕೆಲವು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕಿಯರು ದುಖ ತಾಳಲಾರದೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ವೇದಿಕೆಯಲ್ಲಿ ಆರ್ಯಾಪು ಗ್ರಾಪಂ ಸದಸ್ಯರಾದ ಹರೀಶ್ ನಾಯ್ಕ್, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಸಂದ್ಯಾ ಕೆ, ಹಠಂಯಾರ್ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಪಾಪೆತ್ತಡ್ಕ, ಕೋಶಾಧಿಕಾರಿ ಸುಹೈಲ್, ಪುತ್ತೂರು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್, ಕಾರ್ಯದರ್ಶಿ ನಾಗೇಶ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ, ಸಂಘದ ಕೋಶಾಧಿಕಾರಿ ಶಾಂತಿ ಮೊರಾಸ್, ಶಿಕ್ಷಕರ ಸಂಘದ ಕೋಸಾಧಿಕಾರಿ ಸುಧಾಕರ್, ಧ. ಗ್ರಾ. ಯೋಜನೆಯ ಉಪಾಧ್ಯಕ್ಷ ಹರೀಶ್ ನಾಯ್ಕ್, ಸೇವಾಪ್ರತಿನಿಧಿ ಉಷಾ, ಉದ್ಯಮಿ ಯತೀಶ್ ದೇವಾ ಉಪಸ್ಥಿತರಿದ್ದರು. ಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ನಿವೃತ್ತರಾಗುತ್ತಿರುವ ಶಿಕ್ಷಕಿ ಜಾನಕಿಯವರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಸಾವಿತ್ರಿ ಅಭಿನಂದನಾಪತ್ರ ವಾಚಿಸಿದರು. ಶಿಕ್ಷಕಿ ವತ್ಸಲಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಸೇರಿದಂತೆ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

 

ಪೋಷಕರ ಪ್ರೀತಿಯೇ ದೊಡ್ಡ ಗೌರವ: ತನುಜಾ
ಬಿಐಇಆರ್‌ಟಿ ತನುಜಾರವರು ಮಾತನಾಡಿ ಸರಕಾರಿ ಶಾಲೆಯೊಂದರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ ಎಂದು ಅವರಿಗೆ ಶಾಲೆಯ ಪೋಷಕರು, ಗ್ರಾಮಸ್ಥರು ಸನ್ಮಾನ ಮಾಡುತ್ತಿದ್ದಾರೆ ಎಂದರೆ ಅದು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಸಿಗುವ ದೊಡ್ಡ ಗೌರವವಾಗಿದೆ. ಮುಖ್ಯ ಶಿಕ್ಷಕಿ ಜಾನಕಿ ಯವರು ಹಂಟ್ಯಾರ್ ಶಾಲೆಯನ್ನು , ಶಾಲೆಯ ಪೋಷಕರನ್ನು ಹೇಗೆ ಅಭಿವೃದ್ದಿ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಸಾರ್ವಜನಿಕರೇ ಸಾಕ್ಷಿಯಾಗಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದುವುದು ಸಹಕ ಪ್ರಕ್ರಿಯೆಯಾಗಿದೆ, ನಿವೃತ್ತಿ ಹೊಂದುವ ವೇಳೆ ನಾವು ಮಾಡಿದ ಸೇವೆಯನ್ನು ಜನ ಗುರುತಿಸಿದರೆ ಅದುವೇ ನಿವೃತ್ತಿ ಜೀವನದ ಗೌರವವಾಗಿದೆ ಎಂದು ಹೇಳಿದರು.


ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿಯವರು ಮಾತನಾಡಿ ನಿವೃತ್ತಿ ಹೊಂದುತ್ತಿರುವ ಮುಖ್ಯ ಶಿಕ್ಷಕಿ ಜಾನಕಿಯವರು ಶಾಲೆಯ ವಿದ್ಯಾರ್ಥಿಗಳ ಜೊತೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಶಾಲೆಯನ್ನು ತನ್ನ ಮನೆಯಂತೆ ಕಾಣುತ್ತಿದ್ದ ಅವರಿಗೆ ವಿದ್ಯಾರ್ಥಿಗಳೇ ಮಕ್ಕಳಂತಿದ್ದರು, ಇಂಥಹ ಶಿಕ್ಷಕಿಯನ್ನು ಪಡೆದ ಹಂಟ್ಯಾರ್ ಶಾಲೆಯ ಪೋಷಕರು ಧನ್ಯರು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಸುನಿತಾಶೆಟ್ಟಿ ಮಾತನಾಡಿ ಹಂಟ್ಯಾರ್ ಶಾಲೆಯ ಅಭಿವೃದ್ದಿಗೆ ಶಿಕ್ಷಕಿ ಜಾನಕಿಯವರು ಮುತುವರ್ಜಿವಹಿಸುತ್ತಿದ್ದರು. ಗ್ರಾಮೀಣಾಭಿವೃದ್ದಿ ಯೋಜನೆಯಿಂದ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ನೀಡಲಾಗಿದೆ. ಶಾಲೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಎಲ್ಲರಲ್ಲೂ ಪ್ರೀತಿ ತೋರಿಸುತ್ತಿದ್ದರು; ಬಾಬು
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕಾದರೆ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಉತ್ತಮ ಶಿಕ್ಷಕರು ಬೇಕಾಗಿದೆ. ಹಂಟ್ಯಾರ್ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಜಾನಕಿಯವರು ಹಂಟ್ಯಾರ್ ಶಾಲೆಯನ್ನು ಬೆಳಗಿಸಿದವರು. ಶಾಲೆಯೆಂದರೆ ಅದು ಸರ್ವಧರ್ಮದವರ ಕೇಂದ್ರವಾಗಿದೆ. ಎಲ್ಲಾ ಧರ್ಮದ ವಿದ್ಯಾರ್ಥಿಗಳು ಒಟ್ಟು ಸೇರಿ ಸುಂದರ ಹೋದೋಟದಂತಿರುವ ಶಾಲೆಯಲ್ಲಿ ಕಳಂಕ ತರುವ ವ್ಯಕ್ತಿಗಳೂ ಸಮಾಜದಲ್ಲಿದ್ದಾರೆ ಅಂಥವರಿಗೆ ಯಾರೂ ಅವಕಾಶ ನೀಡಬಾರದು. ಶಿಕ್ಷಕರನ್ನು ದೇವರಂತೆ ಕಾಣುವ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಆತ್ಮತೃಪ್ತಿ ಇದೆ; ಜಾನಕಿ ಎಂ
ವಿದಾಯ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಜಾನಕಿ ಎಂ ರವರು ಮಾತನಾಡಿ ಎಲ್ಲರ ಸಹಕಾರದಿಂದ ಹಂಟ್ಯಾರ್ ಶಾಲೆ ಅಭಿವೃದ್ದಿಯತ್ತ ಸಾಗುತ್ತಿದೆ. ಶಾಲಾ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಇಲಾಖೆಯಲ್ಲಿ ನಮ್ಮ ಶಾಲೆ ಉತ್ತಮ ಹೆಸರನ್ನು ಪಡೆಯುವಂತಾಗಿದೆ. ೪೦ ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡ ನನಗೆ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮರೆಯಲಿಲ್ಲ ಎಂಬ ಆತ್ಮ ತೃಪ್ತಿ ನನಗಿದೆ. ಪೋಷಕರ , ವಿದ್ಯಾರ್ಥಿಗಳ ಸನ್ಮಾನಕ್ಕೆ ನಾನು ಚಿರಋಣಿಯಗಿದ್ದೇನೆ ಎಂದು ಹೇಳಿದರು. ಹಂಟ್ಯಾರ್ ಶಾಲೆ ಇನ್ನೂ ಅಭಿವೃದ್ದಿಯಾಗಬೇಕಿದೆ ಇದಕ್ಕೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ.ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶಾಲೆ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ನಮಗೆ ಜ್ಞಾನವನ್ನು ನೀಡಿದ ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸನ್ಮಾನ ಕಾರ್ಯಕ್ರಮ
ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕಿ ಜಾನಕಿ ಎಂ ರವರಿಗೆ ಶಾಲಾ ಎಸ್‌ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ಹಳೆ ವಿದ್ಯಾರ್ತಿ ಸಂಘ, ಶಾಲಾ ಶಿಕ್ಷಕರು, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿದ್ಯಾರ್ಥಿಗಳು, ಪೋಷಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶಾಲಾ ಮಕ್ಕಳು ಸಾಲು ಸಾಲಾಗಿ ಬಂದು ತಮ್ಮ ನೆಚ್ಚಿನ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದರು.

ಕಣ್ಣೀರು ಹಾಕಿದ ವಿದ್ಯಾರ್ಥಿಗಳು, ಪೋಷಕರು
ತಮ್ಮ ನೆಚ್ಚಿನ ಶಿಕ್ಷಕಿ ಜಾನಕಿಯವರ ವಿದಾಯ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಕೆಲವು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕಿಯರು ದುಖ ತಾಳಲಾರದೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ವೇದಿಕೆಯಲ್ಲಿ ಆರ್ಯಾಪು ಗ್ರಾಪಂ ಸದಸ್ಯರಾದ ಹರೀಶ್ ನಾಯ್ಕ್, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಸಂದ್ಯಾ ಕೆ, ಹಠಂಯಾರ್ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಪಾಪೆತ್ತಡ್ಕ, ಕೋಶಾಧಿಕಾರಿ ಸುಹೈಲ್, ಪುತ್ತೂರು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್, ಕಾರ್ಯದರ್ಶಿ ನಾಗೇಶ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ, ಸಂಘದ ಕೋಶಾಧಿಕಾರಿ ಶಾಂತಿ ಮೊರಾಸ್, ಶಿಕ್ಷಕರ ಸಂಘದ ಕೋಸಾಧಿಕಾರಿ ಸುಧಾಕರ್, ಧ. ಗ್ರಾ. ಯೋಜನೆಯ ಉಪಾಧ್ಯಕ್ಷ ಹರೀಶ್ ನಾಯ್ಕ್, ಸೇವಾಪ್ರತಿನಿಧಿ ಉಷಾ, ಉದ್ಯಮಿ ಯತೀಶ್ ದೇವಾ ಉಪಸ್ಥಿತರಿದ್ದರು.

ಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ನಿವೃತ್ತರಾಗುತ್ತಿರುವ ಶಿಕ್ಷಕಿ ಜಾನಕಿಯವರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಸಾವಿತ್ರಿ ಅಭಿನಂದನಾಪತ್ರ ವಾಚಿಸಿದರು. ಶಿಕ್ಷಕಿ ವತ್ಸಲಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಸೇರಿದಂತೆ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಬೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here