ಸರಕಾರಿ ಡಿ ಗ್ರೂಪ್ ನೌಕರರ ಸಂಘ ಪುತ್ತೂರು ಘಟಕದ ಮಹಾಸಭೆ

0

  • ಅಧ್ಯಕ್ಷ ಚಂದ್ರಗೌಡ ಬಿ, ಉಪಾಧ್ಯಕ್ಷ ಪದ್ಮನಾಭ, ಕಾರ್ಯದರ್ಶಿ ತಿಲೋತ್ತಮೆ
  • ಕೆಲಸ ಮಾಡುವ ಸ್ಥಳದಲ್ಲಿ ಏನೇ ಸಮಸ್ಯೆ ಬಂದರೂ ಸಂಘ ನಿಮ್ಮೊಂದಿರುತ್ತದೆ – ಚಂದ್ರಗೌಡ

ಪುತ್ತೂರು: ಡಿ ಗ್ರೂಪ್ ನೌಕರರ ಸಂಘ ಪುತ್ತೂರು ಇದರ 2022-23ಸಾಲಿನ ಮಹಾಸಭೆ ಜೂ. 25ರಂದು ಸಂಘದ ಕಚೇರಿಯಲ್ಲಿ ನಿಕಟ ಪೂರ್ವ ಅಧ್ಯಕ್ಷೆ ದೇವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

 

ನೂತನ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಚಂದ್ರಗೌಡ ಬಿ, ಉಪಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಪದ್ಮನಾಭ, ಕಾರ್ಯದರ್ಶಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕುಮಾರಿ ತಿಲೋತ್ತಮೆ, ಸಹ ಕಾರ್ಯದರ್ಶಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಲತಾ ಕುಮಾರಿ, ಗೌರವಾಧ್ಯಕ್ಷರಾಗಿ ಸಮಾಜ ಕಲ್ಯಾಣ ಇಲಾಖೆಯ ಈಶ್ವರ ಕುಲಾಲ್, ಕೋಶಾಧ್ಯಕ್ಷರಾಗಿ ತಾಲೂಕು ಪಂಚಾಯತ್ ಇಲಾಖೆಯ ಶ್ರೀಮತಿ ಮೀನಾಕ್ಷಿ , ಸಂಘಟನಾ ಹಾಗೂ ಸಹ ಸಂಘಟನಾ ಕಾರ್ಯದರ್ಶಿಯಾಗಿ ಆದಾಯ ತೆರಿಗೆ ಇಲಾಖೆಯ ಗೋಪಾಲ, ಸಮಾಜ ಕಲ್ಯಾಣ ಇಲಾಖೆಯ ಸುಷ್ಮಾ ಅವರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಸಂಘದ ಮುಂದಿನ ಕಾರ್ಯ ಚಟುವಟಿಕೆ ಹಾಗೂ ನೌಕರರ ಸಮಸ್ಯೆ ಕುರಿತು ಚರ್ಚಿಸಲಾಯಿತು.

ಕೆಲಸ ಮಾಡುವ ಸ್ಥಳದಲ್ಲಿ ಏನೇ ಸಮಸ್ಯೆ ಬಂದರೂ ಸಂಘ ನಿಮ್ಮೊಂದಿರುತ್ತದೆ:
ಸಂಘದ ನೂತನ ಅಧ್ಯಕ್ಷ ಚಂದ್ರ ಗೌಡ ಬಿ ಅವರು ಮಾತನಾಡಿ ನೌಕರರಿಗೆ ಕೆಲಸ ಮಾಡುವ ಸ್ಥಳದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಲು ನಮ್ಮ ಕಾರ್ಯಕಾರಿ ಸಮಿತಿ ಜೊತೆಗಿರುತ್ತದೆ ಎಂದರು. ಸಭೆಯಲ್ಲಿ ಸಂಘ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಗಣೇಶ ಹೆಗ್ಡೆಯವರು ವಂದಿಸಿದರು.

LEAVE A REPLY

Please enter your comment!
Please enter your name here