ಯೋಗದಲ್ಲಿ ಸಾಧನೆ; ಕಡಬದ ಸಾನ್ವಿಗೆ ಸನ್ಮಾನ

0

ಕಡಬ: ಆಮಂತ್ರಣ ಸಂಸ್ಥೆ ಶ್ರಮಿಕಾ ಸೇವಾ ಟ್ರಸ್ಟ್ ಬೆಳ್ತಂಗಡಿ ಇವರ ಸಾರಥ್ಯದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ಸಹಕಾರದಲ್ಲಿ ಕಾರ್ಕಳ ಪೆರ್ವಾಜೆ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ವಿವಿಧ ರಂಗದ ಪ್ರತಿಭೆಗಳನ್ನು ಗೌರವಿಸುವ “ಕಲಾ ಆರಾಧನೆ – 2022” ಕಾರ್ಯಕ್ರಮದಲ್ಲಿ ಪಂಜ ದೊಡ್ಡಮನೆಯ ಸಾನ್ವಿಯವರನ್ನು ಯೋಗದಲ್ಲಿನ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು, ಇವರು ನಿರಂತರ ಯೋಗ ಕೇಂದ್ರ ಸುಳ್ಯ ಇಲ್ಲಿನ ಯೋಗ ಗುರು ಶರತ್ ಮರ್ಗಿಲಡ್ಕ ಇವರ ಶಿಷ್ಯೆ. ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ. ಕಡಬ ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ಸ್‌ನ ಮಾಲಕ ನಿತ್ಯಾನಂದ ದೊಡ್ಡಮನೆ ಮತ್ತು ಸೀತಾಲಕ್ಷ್ಮಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here