ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆ

0

  • ರೈತರ ಬಾಕಿ ಇರುವ ಸಾಲ ಮನ್ನಾ ಶೀಘ್ರ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಮನವಿ ನೀಡಲು ನಿರ್ಧಾರ

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆಯು ಬೊಳುವಾರಿನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ 42 ಮಂದಿ ಸದಸ್ಯ ರೈತರಿಗೆ ಸರಕಾರದಿಂದ ಸಾಲಮನ್ನ ಬಿಡುಗಡೆಗೆ ಬಾಕಿ ಇದ್ದು ಸರಕಾರದಿಂದ ಶೀಘ್ರವೇ ಬಾಕಿ ಇರುವ ರೈತರಿಗೆ ಸಾಲ ಮನ್ನ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಬನ್ನೂರು ರೈತರ ಸೇವಾ ಸಹಖಾರಿ ಸಂಘದ ಸದಸ್ಯರಾಗಿದ್ದು ಕೋವಿಡ್‌ನಿಂದ ಮೃತಪಟ್ಟ ಇಬ್ಬರು ರೈತರಿಗೆ ನಿರ್ದಿಷ್ಟ ಪರಿಹಾರ ಮೊತ್ತ ಬಿಡುಗಡೆಯಾಗಿದ್ದು ಈ ಮೊತ್ತವನ್ನು ಮೃತಪಟ್ಟ ರೈತರ ವಾರೀಸುದಾರರ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಯಿತು. ರೈತರಿಗೆ ಸ್ಪರ್ಧಾತ್ಮಕ ದರದಲ್ಲಿ ಹರಳಿಂಡಿ, ಮೈಲುತುತ್ತು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಎಲ್ಲಾ ಶಾಖೆಗಳಲ್ಲಿ ದೊರೆಯುತ್ತಿದ್ದು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್, ನಿರ್ದೇಶಕ ಸುಭಾಶ್ ನಾಯಕ್, ದೇವಾನಂದ ಕೆ., ಮೋಹನ್ ಪಕ್ಕಳ ಕುಂಡಾಪು, ಸ್ಮಿತಾ ಜೆ. ಭಂಡಾರಿ, ಸುಬ್ರಹ್ಮಣ್ಯ ಗೌಡ ಹನಿಯೂರು, ಜಯಲಕ್ಷ್ಮಿ ಸುರೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು. ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ವ್ಯವಸ್ಥಾಪಕಿ ರಾಧಾ ಬಿ. ರೈ ವಂದಿಸಿದರು.

LEAVE A REPLY

Please enter your comment!
Please enter your name here