ಸರಸ್ವತಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಅಭಯ್ ನಾಯಕ್ ಸವಣೂರು, ಉಪಾಧ್ಯಕ್ಷರಾಗಿ ಅಪರ್ಣಾ ಕಲ್ಲಿಮಾರ್, ಕಾರ್ಯದರ್ಶಿಯಾಗಿ ಅಮೃತಾಂಬಾ ಪ್ರಭು ಆಯ್ಕೆ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.)ಪುತ್ತೂರು ಇದರ ಸರಸ್ವತಿ ವಿದ್ಯಾರ್ಥಿ ಸಂಘದ ಈ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ‌ಸುದರ್ಶನ ಪ್ರಭು ಕೋಡಿಂಬಾಡಿ, ಅಧ್ಯಕ್ಷರಾಗಿ ಅಭಯ್ ನಾಯಕ್ ಪರಣೆ, ಉಪಾಧ್ಯಕ್ಷರಾಗಿ ಅಪರ್ಣಾ ಕಲ್ಲಿಮಾರ್, ಕಾರ್ಯದರ್ಶಿಯಾಗಿ ಅಮೃತಾಂಬಾ ಪ್ರಭು, ಜತೆ ಕಾರ್ಯದರ್ಶಿಯಾಗಿ ಆದರ್ಶ್ ಮನೆವಾರ್ತೆ, ಕೋಶಾಧಿಕಾರಿಯಾಗಿ ಪ್ರಣಾಮ್, ಸಂಘಟನಾ ಕಾರ್ಯದರ್ಶಿಯಾಗಿ ನವ್ಯಾ ಮತ್ತು ಅವನೀಶ್, ವಿವೇಕಾನಂದ ಕಾಲೇಜು ಪ್ರತಿನಿಧಿಗಳಾಗಿ ವಿದ್ಯಾ ಮೂಡಾಯಿತೋಟ, ಸಂತಫಿಲೋಮಿನಾ ಕಾಲೇಜು ಪ್ರತಿನಿಧಿಯಾಗಿ ಅಭಿಷೇಕ್ ಬಜತ್ತನೆ, ವಲಯ ಪ್ರತಿನಿಧಿಗಳಾಗಿ ಶ್ರವಣ್, ಶ್ರಾವ್ಯ ಗುರುವಾಯನಕೆರೆ, ಪ್ರಜ್ಞಾ, ಶರ್ಮಿಳಾ, ದುರ್ಗಾ ಪ್ರಸಾದ್, ಅಭಿಷೇಕ್ ಬೋರ್ಕರ್ ಕತ್ತಲಕಾನ ರವರನ್ನು ಆಯ್ಕೆ ಮಾಡಲಾಯಿತು.

ಮಾರ್ಗದರ್ಶಕರಾಗಿ ಸಂಘದ ಪದಾಧಿಕಾರಿಗಳಾದ ಮೂಲಚಂದ್ರ ಕಾಂಚನ ಹಾಗೂ ನಾರಾಯಣ ನಾಯಕ್ ಪುತ್ತೂರು ಇವರನ್ನು ಸಂಘದ ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಮುಂದಿನ ಕಾರ್ಯಕ್ರಮಗಳು ಇವರ ಮಾರ್ಗದರ್ಶನದಲ್ಲಿ ನಡೆಯಲಿವೆ.

ಸಂಘದ ನಿರ್ದೆಶಕರಾದ ಬಾಲಕೃಷ್ಣ ನಾಯಕ್ ತೆಂಕಿಲ, ವಿಷ್ಣು‌ಪ್ರಭು ಕರಿಂಬಿಲ, ರಮೇಶ್ ಪ್ರಭು, ಪ್ರಧಾನ ಕಾರ್ಯದರ್ಶಿ ‌ಮಲ್ಲಿಕಾ ಕುಕ್ಕಾಡಿ ಇವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ನಿರ್ದೇಶಕರಾದ ಹರಿಪ್ರಸಾದ ಪುಂಡಿಕಾಯಿ ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

Please enter your comment!
Please enter your name here