ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

0

ನಾಯಕಿ: ಇಂಚರಾ ಎಸ್.ಕೆ, ಕಾರ್ಯದರ್ಶಿ: ಯಕ್ಷಿತಾ
ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಜೂ.15ರಂದು ನಡೆಯಿತು. ಕಾಲೇಜು ವಿದ್ಯಾರ್ಥಿ ನಾಯಕಿಯಾಗಿ ವಿಜ್ಞಾನ ವಿಭಾಗದ ಇಂಚರ ಎಸ್ ಕೆ ಹಾಗೂ ಕಾರ್ಯದರ್ಶಿಯಾಗಿ ಕಲಾ ವಿಭಾಗದ ಯಕ್ಷಿತಾ ಇವರನ್ನು ಇವಿಎಂ ಸಿಮ್ಯುಲೇಟರ್ ಆಪ್ ಮೂಲಕ ಮತವನ್ನು ಚಲಾಯಿಸಿ ಆಯ್ಕೆಮಾಡಲಾಯಿತು. ಈ ನವೀನ ಪ್ರಯೋಗವನ್ನು ಮಾಡಲು ಕಾಲೇಜಿನ ಉಪನ್ಯಾಸಕಿಯರಾದ ಜಯಲಕ್ಷ್ಮಿ ಮತ್ತು ನಿರ್ಮಾಲ ಇವರು ಸಹಕರಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ಮಾರ್ಗದರ್ಶನ ಮಾಡಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ಚಿತ್ರಲೇಖ ಕೆ. ಚುನಾವಣೆಯ ಮೇಲ್ವಿಚಾರಣೆ ಮಾಡಿದರು. ಎಲ್ಲಾ ಉಪನ್ಯಾಸಕ ವರ್ಗದವರು ಸಹಕರಿಸಿದರು. ಪ್ರತಿ ಬಾರಿಯೂ ಕಾಗದಲ್ಲಿ ಅಭ್ಯರ್ಥಿಯ ಹೆಸರು ಬರೆದು ಮತ ಚಲಾಯಿಸುತ್ತಿದ್ದೇವೆ. ಈ ಬಾರಿ ವಿಭಿನ್ನ ಪ್ರಯತ್ನ ಅಂದರೆ ಮೊಬೈಲ್ ಆಪ್ ಮೂಲಕ ಮತ ಚಲಾಯಿಸಿದೆವು. ಇದೊಂದು ಹೊಸ ಅನುಭವ ಈ ಅನುಭವ ನಮಗೆ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ. ಇದು ನಮಗೆ ಖುಷಿ ತಂದಿದೆ ಎಂದು ಇಂಚರಾ ಎಸ್.ಕೆ ಮತ್ತು ಯಕ್ಷಿತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here