ಚಿಕ್ಕಪುತ್ತೂರಿನಲ್ಲಿ ಶ್ರೀ ವೀರಭದ್ರ ದೇವಸ್ಥಾನ ಪುನರ್ ಪ್ರತಿಷ್ಠೆಗೆ ಭೂಮಿಪೂಜೆ, ಶಿಲಾನ್ಯಾಸ

0

ಶಕ್ತಿಯ ರೂಪ ವೀರಭದ್ರ ಹಿಂದು ಸಮಾಜಕ್ಕೆ ಅಗತ್ಯ- ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: ಚಿಕ್ಕಪುತ್ತೂರಿನಲ್ಲಿ ಶ್ರೀ ವೀರಭದ್ರ ದೇವಸ್ಥಾನದ ಪುನರ್ ಪ್ರತಿಷ್ಠೆಗೆ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮ ಜು.7ರಂದು ಬೆಳಿಗ್ಗೆ ಬೆದ್ರಾಳ ಶ್ರೀ ಲಕ್ಷ್ಮೀಶ ತಂತ್ರಿಯವರ ಪೌರೋಹಿತ್ವದಲ್ಲಿ ನಡೆಯಿತು. ಬೆಳಿಗ್ಗೆ ಭೂಮಿ ಪೂಜೆ ನಡೆದ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಶಕ್ತಿಯ ರೂಪ ವೀರಭದ್ರ ಹಿಂದು ಸಮಾಜಕ್ಕೆ ಅಗತ್ಯ:

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಹಿಂದು ಸಮಾಜದ ಮೇಲೆ ಆಗುತ್ತಿರುವ ಆಘಾತಗಳ ಮಧ್ಯೆ ನಂಬಿಕೆಯನ್ನು ಉಳಿಸಲು ಎಲ್ಲಾ ಹಿಂದು ಸಮಾಜದ ಜನರನ್ನು ಒಟ್ಟು ಸೇರಿಸುವ ಕೆಲಸದಲ್ಲಿ ವೀರಭದ್ರನ ಶಕ್ತಿ ಅಪಾರ. ಶಕ್ತಿಯ ರೂಪವಾದ ವೀರಭದ್ರನ ಪ್ರತಿಷ್ಠೆ ಆಗುತ್ತಿರುವುದು ಹಿಂದು ಸಮಾಜಕ್ಕೆ ಸಂತಸದ ವಿಷಯ ಎಂದರು.

ವೀರಭದ್ರ ಕ್ಷೇತ್ರ ಜೀರ್ಣೋದ್ಧಾರದಿಂದ ದಕ್ಷತೆ ಸಿಗುತ್ತದೆ:

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಶಿವನ ಬೆವರಿನ ಅಂಶದಿಂದ ಬಂದ ವೀರಭದ್ರನಿಗೆ ಶಕ್ತಿ ಹೆಚ್ಚಿದೆ. ವೀರಭದ್ರನ ಕ್ಷೇತ್ರ ಜೀರ್ಣೋದ್ದಾರ ಆಗುತ್ತದೆ ಎಂದರೆ ಮುಂದೆ ದಕ್ಷತೆ ಯಾವಾಗಲು ಸಿಗುತ್ತದೆ ಎಂದರ್ಥ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯರೂ ಮತ್ತು ವಾಸ್ತು ಇಂಜಿನಿಯರ್ ಆಗಿರುವ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ, ಪ್ರೇಮ್ ಕುಮಾರ್, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಯರಾಮ ನೆಲ್ಲಿತ್ತಾಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ವಿವೇಕಾನಂದ ಹಾಸ್ಟೇಲ್‌ನ ಕಾರ್ಯದರ್ಶಿ ಶಿವಕುಮಾರ್, ಶ್ರೀ ಮಹಾಲಿಂಗೇಶ್ವರ ಐಟಿಐ ನಿವೃತ್ತ ಅಧಿಕಾರಿ ಉಮೇಶ್ ಗೌಡ ಮಳವೇಲು ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಲಕ್ಷೀಶ ತಂತ್ರಿಯವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಅರ್ಚಕ ಶ್ರೀಕಾಂತ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ವೀರಭದ್ರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ಬಿ.ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಪಿ.ಎನ್ ಸುಭಾಸ್‌ಚಂದ್ರ, ಕೋಶಾಧಿಕಾರಿ ಚಿಂತನ್ ಸಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here