ಪಾಣಾಜೆ: ಗುವೆಲ್‌ ಗದ್ದೆಯಲ್ಲಿ ಬಾವಿ ಕುಸಿತ: ಅಪಾಯದಂಚಿನಲ್ಲಿ‌ ಮನೆ

0

ಬೆಟ್ಟಂಪಾಡಿ: ಪಾಣಾಜೆ ಗ್ರಾಮದ ಗುವೆಲ್‌ಗದ್ದೆ ಶಿವಪ್ರಸಾದ್ ಎಂಬವರ ಮನೆಯ ಕುಡಿಯುವ‌ ನೀರಿನ ಬಾವಿ ಕುಸಿದಿರುವ ಘಟನೆ ಜು. 9 ರಂದು ರಾತ್ರಿ ಸಂಭವಿಸಿದೆ.


ಭಾರೀ ಮಳೆಯಿಂದಾಗಿ ಮನೆ ಸುತ್ತಮುತ್ತ ನೀರಿನ ಒರತೆ ಹರಿವು ಹೆಚ್ಚಾದ ಪರಿಣಾಮ ಬಾವಿ ಕುಸಿದಿದೆ. ಮನೆಯ ಅತೀ ಸಮೀಪದಲ್ಲಿ ಬಾವಿ ಇರುವ ಕಾರಣ ಮನೆಯೂ ಅಪಾಯದಂಚಿನಲ್ಲಿದೆ ಎಂದು ತಿಳಿದುಬಂದಿದೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡದಿರುವ ಪರಿಣಾಮ ಈ ರೀತಿಯಾಗಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here