ಜೆ. ಇ. ಇ ಮೈನ್ಸ್ ಮೊದಲ ಹಂತದ ಪ್ರವೇಶ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾದನೆ

0

ಉಪ್ಪಿನಂಗಡಿ: 2022ನೇ ಜೆಇಇ. ಪರೀಕ್ಷೆಯ ಮೊದಲ ಹಂತದ ಪರೀಕ್ಷಾ ಫಲಿತಾಂಶವನ್ನು ಎನ್‌ಟಿಎ. ಪ್ರಕಟಿಸಿದ ಪ್ರಕಾರ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಬಾರಿಗಿಂತಲೂ ಉತ್ತಮ ಸಾಧನೆ ಮಾಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ತಿಳಿಸಿದ್ದಾರೆ.

ಅಲ್ಲದೇ ಮುಂಬರುವ ಐಐಟಿ-ಜೆಇಇ. ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದು, ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ್ ವಿ.ಕೆ.-92 ಪರ್ಸಂಟೈಲ್ (ರಾಮಕುಂಜದ ವೇಣುಗೋಪಾಲ ಕಲ್ಲುರಾಯ ಮತ್ತು ಆಶಾಲತ ವಿ. ಕಲ್ಲುರಾಯ ದಂಪತಿ ಪುತ್ರ) ರಿತ್ವಿಕ್ ಎನ್.ಬಿ.-88 ಪರ್ಸಂಟೈಲ್ (ಕೆಳಗಿನಬೀಡು ನಾರಾಯಣ ಗೌಡ ಮತ್ತು ಸುಂದರಿ ಪಿ ದಂಪತಿ ಪುತ್ರ) ಅಲ್ಲದೇ ಕಾಮೆಡ್‌ಕೆ ಪರೀಕ್ಷೆಯಲ್ಲಿ ಕೆ. ವರ್ಷಿಣಿ ರೈ 9861ನೇ ರ‍್ಯಾಂಕ್ (ಪೆರ್ನೆಯ ವಸಂತ ರೈ ಮತ್ತು ವಿಮಲ ದಂಪತಿ ಪುತ್ರಿ) ಪಡೆದಿದ್ದಾರೆ.

ಜೆಇಇ. ಮೈನ್ಸ್, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಯಾಗಿದ್ದು ಈ ಉತ್ತಮ ಫಲಿತಾಂಶವು ವಿದ್ಯಾರ್ಥಿಗಳ ಸಮೃದ್ಧ ಭವಿಷ್ಯಕ್ಕೆ ವೇದಿಕೆಯಾಗಲಿದೆ ಮತ್ತು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು, ಉತ್ತಮ ಶಿಕ್ಷಣ, ಎಲ್ಲಾ ರೀತಿಯ ರಾಜ್ಯ-ರಾಷ್ಟç ಮಟ್ಟದ ವೃತ್ತಿಪರ ಶಿಕ್ಷಣ ಪ್ರವೇಶ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವುದಾಗಿ ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here