ಬಡಗನ್ನೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಊರ ಗೌಡರಿಗೆ ಗೌರವಾರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಕಾವು:ಒಕ್ಕಲಿಗ ಗೌಡ ಸೇವಾ ಸಂಘ ಬಡಗನ್ನೂರು ಗ್ರಾಮ ಸಮಿತಿ, ಒಕ್ಕಲಿಗ ಗೌಡ ಮಹಿಳಾ ಘಟಕ ಹಾಗೂ ಯುವ ಘಟಕ ಇವುಗಳ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಗುಂಪುಗಳ ಒಕ್ಕೂಟ ಬಡಗನ್ನೂರು ಇದರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಊರ ಗೌಡರು ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಪಟ್ಟೆ ಶ್ರೀಕ್ರಷ್ಣ ಪ್ರೌಢಶಾಲೆ ಪಟ್ಟೆಯಲ್ಲಿ ನಡೆಯಿತು.

ಒಕ್ಕಲಿಗ ಗೌಡ ಸೇವಾ ಸಂಘ ದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯೂರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು

ಸಮಾಜವನ್ನು ಸಂಘಟಿಸುವುದರ ಜೊತೆಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು- ವಿಶ್ವನಾಥ ಗೌಡ ಕೆಯ್ಯೂರು

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸಮಾಜ ಭಾಂದವರು ಸಮಾಜದ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಯಕತ್ವ ಗುಣವನ್ನು ಬೆಳಿಸಿಕೊಳ್ಳಬೇಕು. ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಸಂಸ್ಕಾರಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಸಂಸ್ಕಾರಯುತ, ಸ್ವಾಸ್ಥ ಸಮಾಜವಾಗಿ ಮೂಡಿಬರಬೇಕು ಎಂದರು.

ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸತ್ಪ್ರಜೆಯಾಗಿ ಮೂಡಿ ಬರಬೇಕು- ನಾಗೇಶ್ ಗೌಡ ಕೆಡೆಂಜಿ

ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಗೌಡ ಕೆಡೆಂಜಿ ಮಾತನಾಡಿ ವಿದ್ಯಾರ್ಥಿಗಳು ಗುಣಮಟ್ಟದ, ಮೌಲ್ಯಯುತ ಶಿಕ್ಷಣ ಪಡೆದು ಸಮಾಜದಲ್ಲಿ ಸತ್ಪ್ರಜೆಯಾಗಿ ಜೀವನ ನಡೆಸಬೇಕು. ಬಡಗನ್ನೂರು ಗ್ರಾಮ ಸಮಿತಿಯು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿವಿ ಮನೋಹರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಂಘಟನೆ ಸಾಧ್ಯ- ಸುಂದರ ಗೌಡ ನಡುಬೈಲು

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸುಂದರ ಗೌಡ ನಡುಬೈಲು ಮಾತನಾಡಿ ಸಂಘದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಎಲ್ಲ ಸಮಾಜ ಬಾಂಧವರು ಕಾರ್ಯಕ್ರಮಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಘವನ್ನು ಮಾದರಿಯಾಗಿ ಬಲಿಷ್ಠವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಸ್ವ ಸಹಾಯ ಸಂಘದ ಮೂಲಕ ಸಮಾಜದ ಅಭಿವೃದ್ಧಿ- ಡಿ ವಿ ಮನೋಹರ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ.ವಿ ಮನೋಹರ್ ಮಾತನಾಡಿ ಸಮುದಾಯದ ಎಲ್ಲಾ ಜನರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು, ನಾಯಕತ್ವ ಗುಣವನ್ನು ಬೆಳಿಸಿಕೊಳ್ಳಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌಡ ಸೇವಾ ಸಂಘದ ಕಾರ್ಯಕ್ರಮ, ಕಾರ್ಯಚಟುವಟಿಕೆ ತಲುಪಬೇಕು ಎಂಬ ಉದ್ದೇಶದಿಂದ ಸ್ವ ಸಹಾಯ ಸಂಘವನ್ನು ರಚಿಸಿಕೊಂಡಿದ್ದು ಇದೀಗ 700 ಕ್ಕೂ ಮಿಕ್ಕಿ ಸ್ವ ಸಹಾಯ ಸಂಘ ರಚನೆಗೊಂಡಿದ್ದು , ಸ್ವ ಸಹಾಯ ಸಂಘಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜವನ್ನು ಸಂಘಟಿತವನ್ನಾಗಿ ಮಾಡೋಣ ಎಂದರು.

ತಾಲೂಕು ಯುವ ಘಟಕದ ಅಧ್ಯಕ್ಷ ನಾಗೇಶ್ ಗೌಡ ಕೇಡೆಂಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು

ಶ್ರೀಕ್ರಷ್ಣ ಪ್ರೌಢಶಾಲೆ ಶಿಕ್ಷಕರಾದ ವಿಶ್ವನಾಥ ಗೌಡ ಬೊಳ್ಳಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಉದ್ಯಮಿ ಶ್ರೀನಿವಾಸ ಗೌಡ ಕನ್ನಯ, ಒಕ್ಕಲಿಗ ಗೌಡ ಸೇವಾ ಸಂಘ ಬಡಗನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ಸಾರೆಪ್ಪಾಡಿ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಗಿರಿಯಪ್ಪ ಗೌಡ ಅಳಂತಡ್ಕ, ಮಹಿಳಾ ಘಟಕದ ಅಧ್ಯಕ್ಷರಾದ ವಿಮಲ ಸಾರೆಪ್ಪಾಡಿ ಉಪಸ್ಥಿತರಿದ್ದರು.

ಶ್ರೀಧರ ಗೌಡ ಕನ್ನಯ ಸ್ವಾಗತಿಸಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಧ್ಯಾಚಂದ್ರಶೇಖರ ಗೌಡ ಸಾರೆಪ್ಪಾಡಿ ಮತ್ತು ತಂಡ ಸಂಘದ ಪ್ರಾರ್ಥನೆ ಪ್ರಾರ್ಥಿಸಿದರು. ವಿಮಲ ಸಾರೆಪ್ಪಾಡಿ ವಂದಿಸಿದರು. ಟ್ರಸ್ಟ್ ನ ಮೇಲ್ವಿಚಾರಕ ವಿಜಯಕುಮಾರ್ ಹಾಗೂ ಪ್ರೇರಕ ಶ್ರೀಕಾಂತ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ

ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆಗೈದ ಪೊಯ್ಯಗದ್ದೆ ದಿ. ಸುಂದರ ಗೌಡ ಹಾಗೂ ರತ್ನಾವತಿ ದಂಪತಿ ಪುತ್ರಿ ಶ್ರೀ ರಕ್ಷಾ, ಕನ್ನಯ ಗಂಗಾಧರ ಗೌಡ ಮತ್ತು ಪವಿತ್ರ ದಂಪತಿ ಪುತ್ರ ಹಸ್ತಿಕ್, ಪಟ್ಟೆ ದೇವಿಪ್ರಸಾದ್ ಮತ್ತು ದಮಯಂತಿ ದಂಪತಿ ಪುತ್ರಿ ಚೈತ್ರ ಹಾಗೂ ಪಿಯುಸಿ ಯಲ್ಲಿ ಸಾಧನೆಗೈದ ಅಲಂತಡ್ಕ ರಮೇಶ ಗೌಡ ಮತ್ತು ಸವಿತಾ ದಂಪತಿ ಪುತ್ರಿ ತ್ರಿವೇಣಿ, ದಿ ಸುಂದರ ಗೌಡ ಮತ್ತು ರತ್ನಾವತಿ ದಂಪತಿ ಪುತ್ರಿ ಸಾಕ್ಷಿ ಸಿ ಹೆಚ್, ರವರನ್ನು ಶಾಲು ಹೊದಿಸಿ, ಹಾರ ಹಾಕಿ ಹೂಗುಚ್ಛ ನೀಡಿ ಗೌರವಿಸಲಾಯಿತು. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಸುಮಾರು 110 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

ಊರ ಗೌಡರುಗಳಿಗೆ ಗೌರವಾರ್ಪಣೆ

ಗ್ರಾಮದಲ್ಲಿ ಊರು ಗೌಡರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಪ್ಪ ಗೌಡ ಸಾರೆಪ್ಪಾಡಿ ನಡುಮನೆ, ರಾಮಣ್ಣಗೌಡ ಸಾರೆಪ್ಪಾಡಿ , ಗಿರಿಯಪ್ಪ ಗೌಡ ಅಲಂತಡ್ಕ, ರಾಮಣ್ಣ ಗೌಡ ಬಸವಹಿತ್ಳು, ಅಪ್ಪಣ್ಣ ಗೌಡ ಅಜಡ್ಕ ಶಾಂತಪ್ಪ ಗೌಡ ಮುಂಡಾಜೆ ಇವರುಗಳನ್ನು ಶಾಲು ಹೊದಿಸಿ ಹಾರ ಹಾಕಿ, ಹೂಗುಚ್ಛ ನೀಡಿ ಗೌರವಿಸಲಾಯಿತು.

ಊರ ಗೌಡರುಗಳಿಗೆ ಗೌರವಾರ್ಪಣೆ

ನಿಧನ ಹೊಂದಿದ ಪದಾಧಿಕಾರಿಗಳಿಗೆ ಮೌನ ಪ್ರಾರ್ಥನೆ ಸಲ್ಲಿಕೆ

ಇತ್ತೀಚಿಗೆ ನಿಧನ ಹೊಂದಿದ ಬಡಗನ್ನೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದ ವೆಂಕಪ್ಪ ಗೌಡ ಸಂಪಿಗೆಮಜಲು, ಉಪಾಧ್ಯಕ್ಷರಾಗಿದ್ದ ಮಾಧವ ಗೌಡ ಅಲಂತಡ್ಕ, ಪಡವನ್ನೂರು ಗ್ರಾಮದ ಉರುಗೌಡರಾಗಿದ್ದ ದೇರಣ್ಣ ಗೌಡ ಕನ್ನಡ್ಕ ರವರಿಗೆ ಕಾರ್ಯಕ್ರಮದ ಆರಂಭದಲ್ಲಿ ಎದ್ದು ನಿಂತು ಅವರ ಆತ್ಮಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here