ಯಾದವ ಸಭಾ ತಾಲೂಕು ಸಮಿತಿಯ ಮಹಾಸಭೆ

0

  • ಸುದ್ದಿಯ ಆನ್ಲೈನ್ ಮತದಾನದಲ್ಲಿ ಚುನಾಯಿತರಾಗಿದ್ದ ಪುರುಷೋತ್ತಮ ಮಣಿಯಾಣಿಯವರಿಗೆ ಅಭಿನಂದನೆ
  • ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಪ್ರಸಾದ್ ಪಾಣಾಜೆ ಆಯ್ಕೆ

ಪುತ್ತೂರು: ಯಾದವ ಸಭಾ ತಾಲೂಕು ಸಮಿತಿ ವಾರ್ಷಿಕ ಸಭೆ ಮತ್ತು ಸುದ್ಧಿ ಬಿಡುಗಡೆ ವತಿಯಿಂದ ವಿವಿಧ ಇಲಾಖೆಗಳ ಉತ್ತಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆಯ್ಕೆಗಾಗಿ ನಡೆಸಿದ್ದ ಆನ್ಲೈನ್ ಮತದಾನದಲ್ಲಿ ಸಾರಿಗೆ ಇಲಾಖೆಯಿಂದ ಅತ್ಯತ್ತಮ ಅಧಿಕಾರಿಯಾಗಿ ಚುನಾಯಿತರಾಗಿದ್ದ ಪುರುಷೋತ್ತಮ ಮಣಿಯಾಣಿಯವರಿಗೆ ಅಭಿನಂದನಾ ಸಮಾರಂಭ ರೋಟರಿ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು. ಯಾದವ ಸಭಾ ತಾಲೂಕು ಅಧ್ಯಕ್ಷ ಸದಾನಂದ ಕುರಿಂಜ ಅಧ್ಯಕ್ಷತೆ ವಹಿಸಿದ್ದರು. ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ.ಮಣಿಯಾಣಿ ಉದ್ಘಾಟನೆ ನೆರವೇರಿಸಿ ಮಾತನಾಡಿ ನಮ್ಮ ಸಮುದಾಯ ಬಾಂಧವರು ಸರಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ನಾವೆಲ್ಲಾ ಸಂಘಟಿತರಾಗಿ ಪ್ರತಿ ಮನೆಗೆ ಸೌಲಭ್ಯಗಳನ್ನು ತಲುಪಿಸುವ ಕೆಲಸದೊಂದಿಗೆ ನೋವಿಗೆ ಸ್ಪಂದಿಸಬೇಕು ಎಂದರು.

 


ಯಾದವ ಸಭಾ ಕೇಂದ್ರೀಯ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು ಮಾತನಾಡಿ, ಸ್ವಾರ್ಥ ಹಾಗೂ ಅಹಂಕಾರ ಬಿಟ್ಟು ಸಮುದಾಯ ಸಂಘಟನೆಗೆ ಶ್ರಮಿಸಬೇಕು. ಎಲ್ಲರ ಪ್ರಯತ್ನದಿಂದ ಯಾದವ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಬೇಕು. ರಾಜಕೀಯವಾಗಿ ಮುಂದೆ ಬಂದು ಹಿಂದುಳಿದವರಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು ಎಂದರು.

ಪುತ್ತೂರು ಯಾದವ ಸಭಾ ಯುವ ವೇದಿಕೆಯ ಅಧ್ಯಕ್ಷ ಶ್ರೀಹರಿ ಪಾಣಾಜೆ ಮಾತನಾಡಿ ನಮ್ಮ ಹಿರಿಯರ ಸಂಘಟನಾ ಬಲದಿಂದ ನಾವು ಪ್ರವರ್ಗ ೧ಕ್ಕೆ ಸೇರಿದ್ದೇವೆ. ನಾವು ಮತ್ತೆ ಸಂಘಟಿತರಾಗಿ ಅದನ್ನು ಉಳಿಸುವ ಪ್ರಯತ್ನ ಮಾಡೋಣ ಎಂದರು. ಮುಂದಿನ ವರ್ಷ ನಡೆಯುವ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಅಭಿನಂದನೆ ಸ್ವೀಕರಿಸಿದ ಪುರುಷೋತ್ತಮ ಮಣಿಯಾಣಿಮಾತನಾಡಿ ಅತ್ಯಂತ ಪ್ರಬಲವಾದ ಸುದ್ದಿ ಮಾಧ್ಯಮದವರು ನೀಡಿದ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಅಭಿನಂದಿಸಿ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ಜಡತ್ವ ಬಿಟ್ಟು ಅಭಿವೃದ್ಧಿಯೆಡೆಗೆ ಸಾಗೋಣ ಎಂದರು.

ಬಳಿಕ ಮಹಾಸಭೆಯಲ್ಲಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಅಧ್ಯಕ್ಷರಾಗಿ ಶ್ರೀಪ್ರಸಾದ್ ಪಾಣಾಜೆ, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ನಿಡ್ಪಳ್ಳಿ, ಖಜಾಂಚಿಯಾಗಿ ಗಿರೀಶ್ ಪುತ್ತೂರು, ಉಪಾಧ್ಯಕ್ಷರಾಗಿ ರವೀಂದ್ರ ದರ್ಬೆತಡ್ಕ, ರಾಧಾಕೃಷ್ಣ ಮಣಿಯಾಣಿ ದೇವಸ್ಯ, ಜೊತೆ ಕಾರ್ಯದರ್ಶಿಯಾಗಿ ಹರಿಕೃಷ್ಣ ಸಂಟ್ಯಾರು, ಲೋಕೇಶ್ ಕುಂಟಾಪು, ಸದಸ್ಯರಾಗಿ ರಾಮಚಂದ್ರ ಮಣಿಯಾಣಿ ಪಾಣಾಜೆ, ಕುಂಙಕೃಷ್ಣ ಮಣಿಯಾಣಿ ತಲಪ್ಪಾಡಿ, ಸೂರ್ಯ ಕಲ್ಲರ್ಪೆ, ದಾಮೋದರ ಮಣಿಯಾಣಿ, ಪ್ರಸಾದ್ ಈಶ್ವರಮಂಗಲ, ಸದಾನಂದ ಮಣಿಯಾಣಿ ಕುರಿಂಜ ಮತ್ತು ಸಂದೇಶ್ ನಿಡ್ಪಳ್ಳಿರವರನ್ನು ಆಯ್ಕೆ ಮಾಡಲಾಯಿತು. ಯಾದವ ಮಹಿಳಾ ಘಟಕದ ಅಧ್ಯಕ್ಷೆ ಯಶೋದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಚಂದ್ರಕಲಾ ಎಂ, ಕೊಗ್ಗು ಮಣಿಯಾಣಿ, ರಾಧಕೃಷ್ಣ ಜಿ, ಪ್ರೇಮರಾಜ್ ಆರ್ಲಪದವು, ಶುಶಾಂತ್ ಆರ್ಲಪದವು, ದಿನೇಶ್ ಯಾದವ್ , ದನಂಜಯ ಯಾದವ್, ವಿನೀತ್, ಹರಿಕೃಷ್ಣ , ಕೃಷ್ಣಪ್ರಸಾದ್ ಸಹಿತ ಹಲವರು ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here