ಕಟ್ಟತಾರು ಮದ್ರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0

  • ಸಮವಸ್ತ್ರದಿಂದ ಮೇಲು-ಕೀಲು ಎನ್ನುವ ಭಾವನೆ ಹೋಗಲಾಡಿಸಲು ಸಾಧ್ಯ-ಅರಿಯಡ್ಕ ಹಾಜಿ

 

ಕಟ್ಟತ್ತಾರು: ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಮದ್ರಸದ ಸುಮಾರು 160ವಿದ್ಯಾರ್ಥಿಗಳಿಗೆ ಉಮರ್ ಹಾಜಿ ಖತಾರ್‌ರವರ ಪ್ರಾಯೋಜಕತ್ವದ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಮಸೀದಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ವಿದ್ಯಾರ್ಥಿಯರ ನಡುವೆ ಉಂಟಾಗುವ ಮೇಲು-ಕೀಲು ಭಾವನೆಗಳನ್ನು ಹೋಗಲಾಡಿಸಲು ಸಮವಸ್ತ್ರದ ಮೂಲಕ ಸಾಧ್ಯವಿದ್ದು ಮಕ್ಕಳಲ್ಲಿ ಶಿಸ್ತು ಮೂಡಿಸಲೂ ಸಮವಸ್ತ್ರದ ಮೂಲಕ ಸಾಧ್ಯವಿದೆ ಎಂದು ಹೇಳಿದರು.

 


ಶಾಲೆಗೆ ಸಮವಸ್ತ್ರ ಧರಿಸಿ ಮಕ್ಕಳು ಹೋಗುತ್ತಾರೆ. ಅದೇ ರೀತಿ ಮದ್ರಸಕ್ಕೂ ಸಮವಸ್ತ್ರ ಧರಿಸಿ ಬಂದರೆ ಅದಕ್ಕೆ ತನ್ನದೇ ಆದ ಮೌಲ್ಯವಿದೆ ಈ ನಿಟ್ಟಿನಲ್ಲಿ ಉಮರ್ ಹಾಜಿಯವರು ಮದ್ರಸದ ಮಕ್ಕಳಿಗೆ ತಮ್ಮ ವತಿಯಿಂದ ಕೊಡುಗೆ ರೂಪದಲ್ಲಿ ಸಮವಸ್ತ್ರ ನೀಡಿರುವುದು ಅಭಿನಂದನೀಯ ಎಂದು ಹೇಳಿದರು.

ಸ್ಥಳೀಯ ಮಸೀದಿ ಖತೀಬ್ ಇಸಾಕ್ ಬಾಹಸನಿ ಉದ್ಘಾಟಿಸಿದರು. ಮದ್ರಸ ಸದರ್ ಸಿದ್ದೀಕ್ ಫೈಝಿ, ಅಧ್ಯಾಪಕರಾದ ಉಮರ್ ಅಝ್ಹರಿ, ಮೊಯ್ದೀನ್ ಮುಸ್ಲಿಯಾರ್ , ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಬಿ, ಯೂಸುಫ್ ಹಾಜಿ ಕಟ್ಟತ್ತಾರು, ಬಿ.ಎಂ ಉಮರ್ ಹಾಜಿ, ಜಮಾಅತ್ ಆಡಳಿತ ಸಮಿತಿ ಸದಸ್ಯರು, ಜಮಾಅತ್ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here