ಕೆಲಸಕ್ಕೆಂದು ಸಂಸ್ಥೆಯ ವಿಳಾಸ ಹುಡುಕಿಕೊಂಡು ಬಂದ ಹಿಂದು ಯುವತಿಯ ಜೊತೆಗಿದ್ದ ಆರೋಪ- ಅನ್ಯ ಧರ್ಮದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಹಿಂದು ಸಂಘಟನೆ

ಪುತ್ತೂರು: ಪುತ್ತೂರಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆಂದು ವಿಳಾಸ ಹುಡುಕಿಕೊಂಡು ಬಂದ ಬೆಳಗಾಂ ಮೂಲದ ಹಿಂದು ಯುವತಿಯೊಂದಿಗೆ ಅನ್ಯ ಧರ್ಮದ ವ್ಯಕ್ಯಿಯೊಬ್ಬರು ಜೊತೆಗಿರುವುದನ್ನು ಗಮನಿಸಿದ ಹಿಂದು ಸಂಘಟನೆ ಅನ್ಯ ಧರ್ಮದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಘಟನೆ ಜು.21 ರಂದು ಮಂಜಲ್ಪಡ್ಪುವಿನಲ್ಲಿ ನಡೆದಿದೆ.

ಬೆಳಗಾಂ ಗಾನಪುರ ಮೂಲದ ಹಿಂದು ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಪುತ್ತೂರು ಮಂಜಲ್ಪಡ್ಪುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಾಗ ವಿಳಾಸಕ್ಕಾಗಿ ಮುಕ್ವೆ ಯ ಅನ್ಯ ಧರ್ಮದ ವ್ಯಕ್ತಿ ಆಕೆಗೆ ಸಂಸ್ಥೆಯ ವಿಳಾಸ ತೋರಿಸಿದ್ದಾರೆ. ಆದರೆ ಆತ ಯುವತಿಗೆ ಉದ್ಯೋಗದ ಆಮಿಷವೊಡ್ಡಿ ಪುತ್ತೂರಿಗೆ ಕರಸಿಕೊಂಡ ವಿಚಾರದಲ್ಲಿ ಹಿಂದು ಸಂಘಟನೆ ಈ ಕುರಿತು ಹೆಚ್ಚಿನ ವಿಚಾರಣೆ ಮಾಡುವಂತೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಯುವತಿಯ ಅಣ್ಣ ಸುಳ್ಯದಲ್ಲಿ ಸಾರಣೆ ಕೆಲಸ ಮಾಡಿಕೊಂಡಿದ್ದು. ಆತ ಪುತ್ತೂರು ಪೊಲೀಸ್ ಠಾಣೆಗೆ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.