ಜು.26: ಟೈಲರ್ ವೃತ್ತಿಬಾಂಧವರಿಂದ ಮಂಗಳೂರಿನಲ್ಲಿ ಪ್ರತಿಭಟನೆ

0
  • ಟೈಲರ್ ವೃತ್ತಿಬಾಂಧವರು ಭಾಗವಹಿಸುವಂತೆ ಟೈಲರ್‍ಸ್ ಅಸೋಸಿಯೇಶನ್‌ನಿಂದ ಮನವಿ

 

ಚಿತ್ರ: ರಮೇಶ್‌ ಕೆಮ್ಮಾಯಿ

ಪುತ್ತೂರು : ಟೈಲರ್ ವೃತ್ತಿಬಾಂಧವರ ವಿವಿಧ ಬೇಡಿಕೆ ಈಡೇರಿಸಿ ಜು.26ರಂದು ದ.ಕ. ಜಿಲ್ಲಾಧಿಕಾರಿ ಕಛೇರಿ ಎದುರು ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲಾ ಟೈಲರ್ ವೃತ್ತಿಬಾಂಧವರು ಭಾಗವಹಿಸುವಂತೆ ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್‌ನ ಪುತ್ತೂರು ಕ್ಷೇತ್ರ ಸಮಿತಿ ಮತ್ತು ನಗರ ವಲಯ ಸಮಿತಿ ವತಿಯಿಂದ ಪುತ್ತೂರು ನಗರದ ಟೈಲರ್ ಅಂಗಡಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.


ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ನಗರ ಅಧ್ಯಕ್ಷ ಯಶೋಧರ ಜೈನ್ ದರ್ಬೆರವರ ನೇತೃತ್ವದಲ್ಲಿ ಪುತ್ತೂರು ನಗರ, ದರ್ಬೆ, ಪರ್ಲಡ್ಕ, ತೆಂಕಿಲ, ಬೊಳುವಾರು, ನೆಹರೂನಗರ, ಮುರ, ಕಬಕ, ಪಡ್ನೂರು, ಬನ್ನೂರು, ಪಡೀಲು, ಕೆಮ್ಮಾಯಿಯಲ್ಲಿ ಪ್ರತೀ ಟೈಲರ್ ಅಂಗಡಿಗಳಿಗೆ ಭೇಟಿ ನೀಡಲಾಯಿತು. ಜಿಲ್ಲಾ ಅಧ್ಯಕ್ಷ ಜಯಂತ ಉರ್ಲಾಂಡಿ, ನಗರ ವಲಯ ಕಾರ್ಯದರ್ಶಿ ಭಾರತಿಹರೀಶ್, ತಾಲೂಕು ಅಧ್ಯಕ್ಷ ಜಯರಾಮ ಬಿ.ಎನ್., ಕಾರ್ಯದರ್ಶಿ ಉಮಾ ಯು. ನಾಕ್, ಕೋಶಾಧಿಕಾರಿ ಜಯದೇವ್, ಸುಜಾತ ಮಂದಾರ, ಆಶಾ ಕಲ್ಲಾರೆ, ದಿನೇಶ್ ಸಂಪ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here