ನಿಧನ : ಬಿಜೆಪಿ ಹಿರಿಯ ಕಾರ್ಯಕರ್ತ ಹರಿಣಾಕ್ಷ ಎಚ್ ನಾಯ್ಕ್ ನಿಧನ

0

ಪುತ್ತೂರು: ಎಸ್‌ಡಿಎಂ ಟೂರ‍್ಸ್ ಆಂಡ್ ಟ್ರಾವೆಲ್ಸ್‌ನ ಮಾಲಕ, ಬಿಜೆಪಿಯ ಹಿರಿಯ ಕಾರ್ಯಕರ್ತ, ಬನ್ನೂರು ಶಾಲಾ ಬಳಿಯ ನಿವಾಸಿ ಹರಿಣಾಕ್ಷ ಎಚ್ ನಾಯ್ಕ್ (65 ವ.) ಹೃದಯ ಸಂಬಂಧಿ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. ೩೧ರಂದು ಬೆಳಿಗ್ಗೆ ನಿಧನರಾದರು. ಕಾಶಿ, ಕೇದರನಾಥ, ಬದರೀನಾಥ ಮೊದಲಾದ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಇವರು, ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದರು. ಕಳೆದ ಕೆಲ ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ವಾರಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜುಲೈ ೩೧ರಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ ನಳಿನಾಕ್ಷಿ ಎಚ್. ನಾಯ್ಕ್, ಪುತ್ರ ಮತೀಶ್, ಪುತ್ರಿ ಮಂಜುಶ್ರೀರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here