ಲಯನ್ಸ್ ಕ್ಲಬ್ ಪುತ್ತೂರು/ಪುತ್ತೂರ್ದ ಮುತ್ತು ಕ್ಲಬ್ ನಿಂದ ಸಾಲ್ಮರ ಶಾಲೆಯಲ್ಲಿ ವನಮಹೋತ್ಸವ

0

ಪುತ್ತೂರು: ಸಾಲ್ಮರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಜಂಟಿಯಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಲಯನ್ಸ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಕೇಶವ ನಾಯಕ್ ರವರು ವನಮಹೋತ್ಸವದ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ವಿವರಿಸಿದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಮತ್ತು ಕಾರ್ಯದರ್ಶಿ ಮೋಹನ್ ನಾಯಕ್, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸಲಹೆಗಾರ ಗಣೇಶ್ ಶೆಟ್ಟಿ,ಸದಸ್ಯರಾದ ಜಯಶ್ರೀ ಶೆಟ್ಟಿ, ಪ್ರೇಮಲತಾ ರಾವ್, ವತ್ಸಲಾ ರಾಜ್ಞಿ, ಶಾರದಾ ಕೇಶವ, ರೋಹಿಣಿ ಆಚಾರ್ಯ, ಅನ್ವರ್ ಖಾಸಿಂ, ರವಿಪ್ರಸಾದ್ ಶೆಟ್ಟಿ, ರಂಗನಾಥ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here