ಸವಣೂರು ಉ.ಹಿ.ಪ್ರಾ.ಶಾಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ

0

 

ಪುತ್ತೂರು: ಮಾತೆಯರ ಪವಿತ್ರ ದಿನವಾದ ವರಮಹಾಲಕ್ಷ್ಮಿಹಬ್ಬವನ್ನು ಆ. 5 ರಂದು ಸ ಉ ಹಿ ಪ್ರಾ ಶಾಲೆ ಸವಣೂರು ಇಲ್ಲಿ ವಿಶೇಷವಾಗಿ ಆಚರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ .ಆರ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿನಿಯರು ಎಲ್ಲಾ ಶಿಕ್ಷಕಿ ಮಾತೆಯರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ಆರತಿ ಬೆಳಗಿ ತಿಲಕವನ್ನಿಟ್ಟು ಸ್ವಾಗತಿಸಿದರು. ಎಲ್ಲಾ ಶಿಕ್ಷಕಿಯರನ್ನು ಸೀರೆ ಹಾಗೂ ಶಾಲಿನೊಂದಿಗೆ ಗೌರವಿಸಲಾಯಿತು. ಬಿ ಇ ಒ ಲೋಕೇಶ್ ಎಸ್. ಆರ್ ರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಸವಣೂರು ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕಿ ಸುಶ್ಮಿತಾ,ಆಶಾ ಕಾರ್ಯಕರ್ತೆ ಅನಿತಾ ಮತ್ತು ಶಾಲಾ ಮುಖ್ಯ ಗುರು ಬಾಲಕೃಷ್ಣ ಕೆ ಮತ್ತು ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here