ಸಹಕಾರಿ ರತ್ನ‌ ಸವಣೂರು ಸೀತಾರಾಮ ರೈರವರಿಗೆ ಕಡಬ ಕ.ಸಾ.ಪ ದಿಂದ ಸನ್ಮಾನ ‌‌‌‌‌‌‌‌‌‌‌

0

ಚಿತ್ರ – ಉಮಾಪ್ರಸಾದ್ ರೈ ನಡುಬೈಲು

ಕಡಬ: ಸಹಕಾರ ರತ್ನ ಪುರಸ್ಕೃತರಾದ, ಕನ್ನಡ ಸಾಹಿತ್ಯ ಪೋಷಕರಾದ, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರನ್ನು‌ ಜು. 4 ರಂದು ಕಡಬ ಸರಸ್ವತೀ ವಿದ್ಯಾಲಯದ್ಲಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ನರಸಿಂಹ ರಾವ್ ಕಲ್ಸಂಕ, ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮುಕುಡೆರವರು ಅತಿಥಿಯಾಗಿ ಭಾಗವಹಿಸಿದ್ದರು. ಸಾಹಿತಿ ಟಿ.ನಾರಾಯಣ ಭಟ್ ರಾಮಕುಂಜ ಸನ್ಮಾನಿತರ ಪರಿಚಯಗೈದರು.

ವೇದಿಕೆಯಲ್ಲಿ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಾರ್ಯದರ್ಶಿ ಪಿ.ವಸಂತ್ ಕುಮಾರ್, ಸಾಹಿತ್ಯ ಪರಿಷತ್ ಸದಸ್ಯರಾದ ಯಶವಂತ್ ರೈ ಮರ್ದಾಳ, ರಮೇಶ್ ಪ್ರಭು ಉಡುಪಿ, ನಾರ್ಣಪ್ಪ ನಾಯ್ಕ್ , ವೆಂಕಟ್ರಮಣ ನೆಲ್ಯಾಡಿ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ನಾಯಕ್ ವಂದಿಸಿದರು. ಸರಸ್ವತಿ ವಿದ್ಯಾಲಯದ ಶಿಕ್ಷಕಿ ಹೇಮಲತಾ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here