ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವ, ಗುರುವಂದನ, ಶ್ರೀ ಮಾತಾ ಅನ್ನಚತ್ರದ ಉದ್ಘಾಟನೆ

0

ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ: ಒಡಿಯೂರು ಶ್ರೀ

ಪರಿವರ್ತನೆಯ ಹರಿಕಾರ ಒಡಿಯೂರು ಶ್ರೀ: ಮಾಣಿಲ ಶ್ರೀ

ಸಮಾಜದ ಏಳಿಗೆಗಾಗಿ ಶ್ರೀಗಳಿಂದ ನಿರಂತರ ಪ್ರಯತ್ನ:
ಸದಾಶಿವ ಕೆ. ಶೆಟ್ಟಿ

ವಿಟ್ಲ: ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ಸತ್ಕರ್ಮದಿಂದ ಮಾಡಿದ ಸೇವೆಗೆ ಪ್ರತಿಫಲವಿದೆ. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಆ.೮ರಂದು ಒಡಿಯೂರು ಶ್ರೀಗಳವರ ಜನ್ಮದಿನೋತ್ಸವದ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ, ನೂತನವಾಗಿ ನಿರ್ಮಿಸಲಾದ ಶ್ರೀ ಮಾತಾ ಅನ್ನಚತ್ರದ ಉದ್ಘಾಟನೆಯ ಬಳಿಕ ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ತ್ಯಾಗ ತುಂಬಿದ ಸೇವೆ ದೇಶವನ್ನು ಬೆಳಗಿಸುತ್ತದೆ‌ ಮಾತ್ರವಲ್ಲದೆ ವ್ಯಕ್ತಿತ್ವವನ್ನು ಹೆಚ್ಚುಗೊಳಿಸುತ್ತದೆ‌. ತ್ಯಾಗ ಮತ್ತು ಸೇವೆ ಬದುಕಿನಲ್ಲಿ ಬಹುಮುಖ್ಯ. ಕ್ರಿಯಶೀಲ ಶಾಸಕರಿದ್ದಾಗ ಕ್ಷೇತ್ರಾಭಿವೃದ್ಧಿ ಕ್ಷಿಪ್ರವಾಗಿ ನಡೆಯುತ್ತದೆ. ಅರಿವಿನೊಂದಿಗೆ ಮಾಡುವ ಸೇವೆ ದೇವರಿಗೆ ಪ್ರಿಯವಾದುದು. ತಿಳಿದು ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ನಮ್ಮನ್ನು ಆತ್ಮಾವಲೋಕನ ಮಾಡುವ ಕೆಲಸ ನಮ್ಮಿಂದಲೇ ಆಗಬೇಕು. ಇಂದಿನ ಕಾಲಸ್ಥಿತಿಯ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯವಿದೆ. ಕ್ರಿಯಾಶೀಲ ಕೆಲಸ ಮಾಡುವ ಮಂದಿ ನಮ್ಮೊಂದಿಗಿದ್ದರೆ ಯಶಸ್ಸು ಖಂಡಿತ. ದಾನ ಗುಣ ನಮ್ಮಲ್ಲಿದ್ದಾಗ ಸಂಪತ್ತಿಗೆ ಮೌಲ್ಯ ಬರಲು ಸಾಧ್ಯ. ಜೀವನದಲ್ಲಿ ಮಾಡುವ ಪಾಪ, ಪುಣ್ಯ ನಮ್ಮನ್ನು ಕಾಪಾಡುತ್ತದೆ. ಸತ್ಕರ್ಮದಿಂದ ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ನಿಜವಾದ ಪ್ರೀತಿಯಿಂದ ಲೋಕವನ್ನು ಗೆಲ್ಲಬಹುದು. ಸಂತನ ಬದುಕು ಸಂತನಿಗಲ್ಲ ಅದು ಸಮಾಜದ ಹಿತಕೆ. ಸತ್ಕರ್ಮ ಮಾಡುವ ಚಿಂತನೆ ನಮ್ಮಲ್ಲಿರಬೇಕು ಎಂದರು.

ಶ್ರೀಧಾಮ ಮಾಣಿಲ‌ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಕ್ಷೇತ್ರದ ಮಹಿಮೆ ಅಪಾರ,
ಪರಿವರ್ತನೆಯ ಹರಿಕಾರ ಒಡಿಯೂರು ಶ್ರೀ , ಒಡಿಯೂರು ಶ್ರೀಗಳ ಹೃದಯ ವೈಶಾಲ್ಯತೆ ಇರುವ ಓರ್ವ ಸಂತ. ಸಮಾಜದಲ್ಲಿ ಐಕ್ಯಮತ್ಯ ಅಗತ್ಯ. ನಮ್ಮಲ್ಲಿ ಧರ್ಮನಿಷ್ಠೆ ಮುಖ್ಯ. ಶ್ರೀಗಳ ತುಡಿತ, ಮಿಡಿತ ಸಮಾಜದ ಏಳಿಗೆಗಾಗಿ. ನೈತಿಕ ಬದ್ದತೆಯನ್ನು ಕಲಿಸುವ ಕೆಲಸ ಸಂಸ್ಥಾನದ ವಿದ್ಯಾಸಂಸ್ಥೆಗಳಿಂದಾಗುತ್ತಿದೆ. ಸುದೃಡ ಹಿಂದೂ ಸಮಾಜವನ್ನು ನಿರ್ಮಾಣಮಾಡಲು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ನಮ್ಮ ಮನಸ್ಸುಗಳನ್ನು ಒಟ್ಟು ಮಾಡುವ ಕೆಲಸ ನಮ್ಮಿಂದಲೇ ಆಗಬೇಕು. ಶ್ರೀಗಳು ಸಮಾಜಕ್ಕಾಗಿ ಮಾಡಿರುವ ತ್ಯಾಗ ಅವಿಸ್ಮರಣೀಯವಾಗಿದೆ. ಸತ್ಯದ ಅರಿವು ನಮ್ಮಲ್ಲಿ ಅಗತ್ಯ. ಭಕ್ತಿ, ಭಾವ ಒಂದಾಗಬೇಕು. ಎಲ್ಲರು ಒಂದೇ ಎನ್ನುವ ದೃಷ್ಟಿಕೋನ ನಮ್ಮದಾಗಬೇಕು. ಆಗ ದೇಶಕ್ಕೂ ಸುಭೀಕ್ಷೆ ಎಂದರು.


ಶ್ರೀಮಾತಾ ಅನ್ನಛತ್ರವನ್ನು ಉದ್ಘಾಟಿಸಿದ ಮುಂಬೈನ ಹೇರಂಬ ಇಂಡಸ್ಟ್ರೀಸ್ ನ ನಿರ್ದೇಶಕರಾದ ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನರವರು ಮಾತನಾಡಿ ಬಾಲ್ಯದಲ್ಲಿ ಹಿರಿಯರು ಹೇಳಿಕೊಟ್ಟ ಸಂಸ್ಕೃತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಾಜದ ಏಳಿಗೆಗಾಗಿ ನಿರಂತರವಾಗಿ ಪ್ರಯತ್ನ ಪಡುತ್ತಿರುವ ಸಂತ ಒಡಿಯೂರು ಶ್ರೀಗಳು ಎಂದರು. ಸಾಧ್ವಿ ಶ್ರೀ ಮಾತಾನಂದಮಯೀರವರು ದಿವ್ಯ ಸಾನಿಧ್ಯ ಕರುಣಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್ ಪ್ರಕಾಶ್ , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕಡಾ. ಭರತ್ ಶೆಟ್ಟಿ ವೈ, ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ ಎ.ಕೋಟ್ಯಾನ್, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯಾ ಕಿಶೋರ್ ಶೆಟ್ಟಿ, ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ ಮುಂಬೈ, ಮಂಗಳೂರಿನ ಕಾಂಚನ ಆಟೊಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್, ಮುಂಬೈಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ದಯಾನಂದ ಹೆಗ್ಡೆ, ಮುಲುಂಡ್, ಮುಂಬೈ, ಯಮುನಾ ಬೋರ್ ವೆಲ್ಸ್ ನ ಮಾಲಕ ಪುರುಷೋತ್ತಮ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಜನ್ಮದಿನೋತ್ಸವ ಸಮಿತಿ ಕಾರ್ಯದರ್ಶಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ದೆಯಲ್ಲಿ ಚಿನ್ನದ ಪದಕ ವಿಜೇತ ಚಿಂತನ್ ಎಸ್.ಶೆಟ್ಟಿ, ಜಮ್ಮದಮನೆ ಹಾಗೂ ಶ್ರೀಮದ್ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ಸಾನ್ವಿ ಸಿ.ಎಸ್.ರವರಿಗೆ ಬಾಲಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗ್ರಾಮೋತ್ಸವದ ಅಂಗವಾಗಿ ನಡೆದ ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿವಿಧ ಕಡೆಗಳ ಭಕ್ತರಿಂದ ಶ್ರೀಗಳಿಗೆ ಗುರುವಂದನೆ ನಡೆಯಿತು. ವಿವಿಧ ಫಲಾನುಭವಿಗಳಿಗೆ ಸೇವಾ ರೂಪದಲ್ಲಿ ಸವಲತ್ತುಗಳನ್ನು ನೀಡಲಾಯಿತು.

ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿ, ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು.
ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here