ಕಾವು: ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ, ರಕ್ಷಾಬಂಧನ ಆಚರಣೆ

0

ಕಾವು:ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನಕ್ಕೆ ಕಾವು ಹೊಸಮನೆ ಚಂದ್ರಶೇಖರ ಗೌಡ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ ಸ್ವಾತಂತ್ರ್ಯದ ಅರಿವು ಮೂಡಿಸುವ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಸ್ವಾತಂತ್ರೋತ್ಸವ ಆಚರಿಸುವಂತೆ ಪ್ರಧಾನಮಂತ್ರಿಗಳು ಕರೆ ಕೊಟ್ಟಿದ್ದು ಅದರಂತೆ ತ್ರಿವರ್ಣ ಧ್ವಜವನ್ನು ಪಡೆದುಕೊಂಡು ಪ್ರತಿ ಮನೆಯಲ್ಲೂ ಧ್ವಜ ಹಾರಿಸುವ ಮೂಲಕ ಗೌರವ ಕೊಡಬೇಕೆಂದರು. ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರು ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ ಮಾತನಾಡಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹರಿಸುವುದರ ಜೊತೆಗೆ ರಾಷ್ಟ್ರಧ್ವಜದ ಘನತೆ ಗೌರವಕ್ಕೆ ಯಾವುದೇ ಕಾರಣಕ್ಕೂ ದಕ್ಕೆ ಉಂಟಾಗಬಾರದು ಅದಕ್ಕಾಗಿ ರಾಷ್ಟ್ರ ಧ್ವಜ ಹಾರಿಸುವ ವೇಳೆ ಧ್ವಜ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.

ತಾಲೂಕು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಸಂಚಾಲಕ ಭಾಸ್ಕರ ಬಲ್ಯಾಯ ಮಾತನಾಡಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವದರ ಜೊತೆಗೆ ರಾಷ್ಟ್ರಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕೆಂದರು.

ಬೂತ್ ಅಧ್ಯಕ್ಷರ ಮೂಲಕ ರಾಷ್ಟ್ರಧ್ವಜ ಹಸ್ತಾಂತರ

ತಿರಂಗ ಅಭಿಯಾನದಡಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದ ಬೂತ್ ಅಧ್ಯಕ್ಷರುಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಪ್ರವೀಣ್ ಪಳನೀರು, ಪ್ರಜ್ವಲ್ ಕೆರೆಮಾರು, ಶಿವಪ್ರಸಾದ್ ಕೊಚ್ಚಿ, ನಾರಾಯಣ ಆಚಾರ್ಯ ಮಳಿ ಇವರಿಗೆ ಹಸ್ತಾಂತರ ಮಾಡಲಾಯಿತು.

ರಕ್ಷಾ ಬಂಧನ ಆಚರಣೆ

ಕಾರ್ಯಕ್ರಮದಲ್ಲಿ ರಕ್ಷಾ ಬಂಧನ ಆಚರಣೆ ಮಾಡಲಾಯಿತು,ಶೇಷಪ್ಪ ಗೌಡ ಪರನೀರು ರಕ್ಷಾ ಬಂಧನದ ಮಹತ್ವ ತಿಳಿಸಿದರು, ಚಂದ್ರಶೇಖರ್ ಗೌಡ ಹೊಸಮನೆ ಮತ್ತು ತಾರಾ ದಂಪತಿಗಳು ರಕ್ಷೆ ಹಾಗು ಸಿಹಿ ಹಂಚಿದರು.ಗಣಪಯ್ಯ ಗೌಡ ಮಂಜಲ್ತಡ್ಕ ಸಂಘದ ಪ್ರಾರ್ಥನೆ ಹಾಡಿದರು.ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ವಿಜಿತ್ ಕೆರೆಮಾರು, ಅನಿತಾ ಅಚಾರಿಮೂಲೆ, ಯುವ ಮೋರ್ಚಾ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಬೂತ್ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here