ಕೆದಂಬಾಡಿ ಗ್ರಾಪಂನಲ್ಲಿ ಹರ್ ಘರ್ ತಿರಂಗಾಕ್ಕೆ ಚಾಲನೆ

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಹರ್ ಘರ್ ತಿರಂಗ ಅಭಿಯಾನ ಕ್ಕೆ ಗ್ರಾಮ ಪಂಚಾಯತ್ ಆವರಣದಲ್ಲಿ ಆ.12 ರಂದು ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು. ರಾಷ್ಟ ಧ್ವಜ ಬೇಕಾದವರಿಗೆ ಗ್ರಾಮ ಪಂಚಾಯತ್‌ನಲ್ಲಿ ಧ್ವಜ ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಜಯಲಕ್ಷ್ಮೀ ಬಲ್ಲಾಳ್, ರೇವತಿ, ಸುಜಾತ, ಮಾಜಿ ಸದಸ್ಯ ಬೋಳೋಡಿ ಚಂದ್ರಹಾಸ ರೈ, ಅಂಚೆ ಇಲಾಖೆಯ ಅಧಿಕಾರಿ ಹೇಮಾ, ಪೋಸ್ಟ್‌ಮ್ಯಾನ್ ವಿಜಯ, ಗ್ರಾಮ ಸಹಾಯಕ ಶ್ರೀಧರ್, ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಆನಂದ ರೈ, ಬಿಎಸ್‌ಎನ್‌ಎಲ್ ನಿವೃತ್ತಿ ಉದ್ಯೋಗಿ ನಾರಾಯಣ ಪೂಜಾರಿ ನಂಜೆ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಕಾರ್ಯದರ್ಶಿ ಸುನಂದ ರೈ ವಂದಿಸಿದರು.

400 ಧ್ವಜ ವಿತರಣೆ

ಕೆದಂಬಾಡಿ ಗ್ರಾಮ ಪಂಚಾಯತ್‌ನಿಂದ 400 ಧ್ವಜಗಳನ್ನು ವಿತರಿಸಲಾಗಿದೆ. ಇದರಲ್ಲಿ ಸರಕಾರಿ ಇಲಾಖೆಗಳಿಗೆ, ಶಾಲೆ, ಅಂಗನವಾಡಿಗಳಿಗೆ ಉಚಿತವಾಗಿ ನೀಡಲಾಗಿದೆ. 3 ಸೈಜ್‌ನಲ್ಲಿ ಧ್ವಜ ತಯಾರಿಸಲಾಗಿದ್ದು ಇದಕ್ಕೆ ರೂ. 40,30,20 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಧ್ವಜ ಬೇಕಾದವರು ಪಂಚಾಯತ್‌ನಿಂದ ಖರೀದಿಸಬಹುದಾಗಿದೆ.

LEAVE A REPLY

Please enter your comment!
Please enter your name here