ಉಪ್ಪಿನಂಗಡಿ ಪಂಚಾಯಿತಿ, ಸ್ವಾತಂತ್ಯೋತ್ಸವ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ

0

  • ಮಾಜಿ ಸೈನಿಕ, ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿಗೆ ಸನ್ಮಾನ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ಉಪ್ಪಿನಂಗಡಿ ಮತ್ತು ಸ್ವಾತಂತ್ಯ್ರೋತ್ಸವ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಮಾರಂಭ ನಡೆಸಲಾಗಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರನ್ನು ಸನ್ಮಾನಿಸುವ, ಗುರುತಿಸುವ ಕಾರ್‍ಯಕ್ರಮ ನಡೆಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಅರೆಸೇನಾ ಯೋಧ ಸತೀಶ್ ಹೆಗ್ಡೆ ನಟ್ಟಿಬೈಲು, ಮುಖ್ಯಮಂತ್ರಿ ಪದಕ ವಿಜೇತ, ಭ್ರಷ್ಟಾಚಾರ ನಿಗ್ರಹ ದಳದ ಹೆಡ್ ಕಾನ್ಸ್‌ಟೇಬಲ್ ಹರಿಪ್ರಸಾದ್, ಮೆಸ್ಕಾಂ ಸಿಬ್ಬಂದಿ ಭವಿತ್ ಕುಮಾರ್, ವಿಜೇಶ್, ಅಂಗನವಾಡಿ ಕಾರ್‍ಯಕರ್ತೆ ಚಂದ್ರಿಕಾ, ನಿವೃತ್ತ ನೀರು ನಿರ್ವಾಹಕ ಹೈದ್ರೋಸ್, ಗ್ರಾಮ ಪಂಚಾಯಿತಿ ಸ್ವಚ್ಛತೆಗಾರರಾದ ಆನಂದ, ಸುಂದರ, ಗುಲಾಬಿ, ದೇಸಿಲು ಇವರುಗಳನ್ನು ಸನ್ಮಾನಿಸಲಾಯಿತು. ಹಾಗೂ ಪಂಚಾಯಿತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಶಾಸಕ ಸಂಜೀವ ಮಟಂದೂರು, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ದೀನರ ಕನ್ಯಾ ಮಾತೆ ಚರ್ಚ್ ಧರ್ಮಗುರು ಅಬೆಲ್ ಲೋಬೋ, ಸ್ವಾತಂತ್ರ್ಯೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ ಸಂದರ್ಭೋಚಿತವಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರುಗಳಾದ ಯು.ಟಿ. ತೌಸೀಫ್, ಧನಂಜಯ ಕುಮಾರ್, ಯು.ಕೆ. ಇಬ್ರಾಹಿಂ, ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ, ವಿದ್ಯಾಲಕ್ಷ್ಮಿ ಪ್ರಭು, ಉಷಾ ನಾಯ್ಕ್, ನೆಬಿಸ, ಜಯಂತಿ, ರುಕ್ಮಿಣಿ, ಶೋಭಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿಚಂದ್ರ ಶಾಂತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ, ಸಿ.ಎ. ಬೇಂಕ್ ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಸ್ಥಳೀಯ ಸಂಘ ಸಂಸ್ಥೆ ಪದಾಧಿಕಾರಿಗಳಾದ ಚಂದಪ್ಪ ಮೂಲ್ಯ, ವಿದ್ಯಾದರ ಜೈನ್, ಬಿ.ಕೆ. ಆನಂದ, ರಾಜಗೋಪಾಲ ಭಟ್ ಕೈಲಾರ್, ಸುರೇಶ್ ಅತ್ರಮಜಲು ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಸ್ವಾತಂತ್ಯ್ರೋತ್ಸವ ಸಮಿತಿ ಕಾರ್‍ಯದರ್ಶಿ ಕೃಷ್ಣವೇಣಿ ರೈ ಸ್ವಾಗತಿಸಿ, ಪತ್ರಕರ್ತ ಉದಯಕುಮಾರ್ ಯು.ಎಲ್. ವಂದಿಸಿದರು. ಪಿಡಿಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್‍ಯದರ್ಶಿ ದಿನೇಶ್, ಪಂಚಾಯಿತಿ ಸದಸ್ಯ ಲೋಕೇಶ್ ಬೆತ್ತೋಡಿ, ಸ್ವಾತಂತ್ರ್ಯೋತ್ಸವ ಸಮಿತಿ ಸದಸ್ಯರಾದ ವಂದನಾ, ಪಂಚಾಯಿತಿ ಸಿಬ್ಬಂದಿಗಳಾದ ಜ್ಯೋತಿ, ಇಸಾಕ್, ಶ್ರೀನಿವಾಸ, ರಕ್ಷಿತ್, ಆಶಾ, ಮಾಲಿಂಗ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ದೇವಕಿ, ಹರಿಣಾಕ್ಷಿ ಕಾರ್‍ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ:
ಸಭಾ ಕಾರ್‍ಯಕ್ರಮಕ್ಕೆ ಮುನ್ನ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಬಳಿಯಿಂದ ಪೇಟೆಯ ಪ್ರಮುಖ ಬೀದಿಯಾಗಿ ಸಾಗಿ ಹೆದ್ದಾರಿಯ ಮೂಲಕ ಮತ್ತೆ ಸುಧೀಂದ್ರ ಕಲಾ ಮಂದಿರ ತನಕ ಆಕರ್ಷಕ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here