ಹನಿ ಟ್ರ್ಯಾಪ್ ಶಂಕೆ: ದೂರು

0

ಉಪ್ಪಿನಂಗಡಿ: ಅಶ್ಲೀಲ ಮಾತುಗಳೊಂದಿಗೆ ಮೊಬೈಲ್ ಕರೆ ಮಾಡಿ ಹನಿಟ್ಯ್ರಾಪ್ ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಉಪ್ಪಿನಂಗಡಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಂದಾಳುವೊಬ್ಬರಿಗೆ ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವರು ತೀರಾ ಮುಜುಗರವೆನಿಸುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡುತ್ತಾ ಅನೈತಿಕ ನಡೆಗೆ ಆಹ್ವಾನವಿತ್ತಿದ್ದಳು. ಆಕೆಯ ಈ ನಡೆಗೆ ಪ್ರಬಲವಾದ ಹಾಗೂ ತೀಕ್ಷ್ಣವಾದ ಮಾತುಗಳಿಂದ ಆಕ್ಷೇಪವೆತ್ತಿದ್ದಾಗ್ಯೂ ಮೂರ್ನಾಲ್ಕು ಬಾರಿ ಪೋನಾಯಿಸಿ ವಿಕೃತ ವರ್ತನೆ ತೋರಿದಾಗ ಇದೊಂದು ಬ್ಲ್ಯಾಕ್ ಮೇಲ್ ಜಾಲದ ಕೃತ್ಯವೆಂದು ಶಂಕಿಸಿ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here