ವಿದ್ಯಾಮಾತ ಅಕಾಡೆಮಿಯಿಂದ ಅಗ್ನಿವೀರರಿಗೆ ಉಚಿತ ಮೈದಾನ ತರಬೇತಿ ಕಾರ್ಯಾಗಾರ

0

ಪುತ್ತೂರು:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ ನೇಮಕಾತಿ-2022ಕ್ಕೆ ಸಂಬಂಧಿಸಿದಂತೆ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸೆಪ್ಟೆಂಬರ್‌ನಲ್ಲಿ ಹಾವೇರಿಯಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯಿಂದ ಪೂರ್ವಭಾವಿಯಾಗಿ ಉಚಿತ ಮೈದಾನ ತರಬೇತಿ ಕಾರ್ಯಾಗಾರ ಆ.21 ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೈದಾನ ತರಬೇತಿ ಕಾರ್ಯಾಗಾರವು ಬೆಳಿಗ್ಗೆ 7.30 ರಿಂದ 10.30 ರ ವರೆಗೆ ನಡೆಯಲಿದೆ. ಇದರಲ್ಲಿ ಪೂರ್ವಭಾವಿ ಅಭ್ಯಾಸ ತರಬೇತಿ ಮತ್ತು ದೈಹಿಕ ಸದೃಢತೆಯ ನಿಗದಿಪಡಿಸಿರುವ ಕ್ರೀಡಾ ಚಟುವಟಿಕೆಗಳ ಮಾಹಿತಿ, ಮೈದಾನ ತರಬೇತಿಯನ್ನು ನೀಡಲಾಗುವುದು. ಈಗಾಗಲೇ ಅರ್ಜಿಸಲ್ಲಿಸಿರುವ ಪುರುಷ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 1 ರಿಂದ ಮಂಗಳೂರು ವಿಭಾಗದವರಿಗೆ ಹಾವೇರಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆಯು ನಡೆಯಲಿದೆ.

ಕಾರ್ಯಾಗರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಿಗ್ಗೆ 8 ಗಂಟೆಯ ಒಳಗಡೆ ಹಾಜರಿರಬೇಕು. ನಂತರ ಬರುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಮೈದಾನದಲ್ಲಿ ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರಗಳನ್ನು ಧರಿಸತಕ್ಕದ್ದು. ತಾವು ಅರ್ಜಿಸಲ್ಲಿಸಿದ ಪ್ರತಿಯನ್ನು ತರತಕ್ಕದ್ದು. ಪ್ರಸ್ತುತ ಯುವತಿಯರಿಗೂ ಅಗ್ನಿಪಥ್ ಗೆ ಅರ್ಜಿ ಕರೆಯಲಾಗಿದ್ದು ಆಸಕ್ತರು ಭಾಗವಹಿಸಬಹುದು. ನೀರಿನ ಬಾಟಲಿ, ಕರವಸ್ತ್ರ ತರತಕ್ಕದ್ದು. ಭಾಗವಹಿಸುವ ಅಭ್ಯರ್ಥಿಗಳು 20/08/2022 ರ ಒಳಗಡೆ ಕಡ್ಡಾಯವಾಗಿ 8590773486 / 9148935808 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here