ಕೋಡಿಂಬಾಡಿ: ವನಿತಾ ಸಮಾಜದಿಂದ ಆಟಿದ ಕೂಟ

0

ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ವತಿಯಿಂದ ಗ್ರಾಂ ಪಂ ಸಭಾಭವನದಲ್ಲಿ ಆಟಿದ ಕೂಟ ನಡೆಯಿತು. ವನಿತಾ ಸಮಾಜದ ಅಧ್ಯಕ್ಷೆ ಧರ್ಮಾವತಿ ಸೇಡಿಯಾಪು ಅಧ್ಯಕ್ಷತೆ ವಹಿಸಿದ್ದರು.

ವನಿತಾ ಸಮಾಜದ ಗೌರವಾಧ್ಯಕ್ಷರಾದ ಜಿ.ಪಂ.ಮಾಜಿ ಸದಸ್ಯೆ ಶಯನಾ ಜಯಾನಂದ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳ ವಿಶೇಷತೆ ಮತ್ತು ತುಳುನಾಡಿನ ಸಂಪ್ರದಾಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಸಿದರು. ವನಿತಾ ಸಮಾಜದ ಮಾಜಿ ಅಧ್ಯಕ್ಷರೂ ಆಗಿರುವ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಎಸ್.ಶೆಟ್ಟಿ ಹೆಗ್ಡೆಹಿತ್ಲು ಆಟಿ ತಿಂಗಳ ಕುರಿತು ಮಾಹಿತಿ ನೀಡಿದರು.  ವನಿತಾ ಸಮಾಜದ ಕಾರ್ಯದರ್ಶಿ ಭಾರತಿ ದೇವಾನಂದ ಸ್ವಾಗತಿಸಿದರು. ರಾಧಿಕಾ ಆರ್.ಸಾಮಂತ್ ನೆಕ್ಕರಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿಜಯಲಕ್ಷ್ಮಿ ಆರ್.ನಾಯಕ್ ನಿಡ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಆಶಾ ಕಾರ್ಯಕರ್ತೆ ಪ್ರವಿತ್ರಾ ಸುರೇಶ್ ಶೆಟ್ಟಿ ಬರಮೇಲು ಪ್ರಾರ್ಥಿಸಿದರು.

ಆಟಿ ತಿನಿಸು ಸ್ಪರ್ಧೆ, ಆಟೋಟ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ನಿಶ್ಮಿತಾ ದೀಕ್ಷಿತ್ ಮೇಲಿನಹಿತ್ಲು, ಅರ್ಚನಾ ಸುಭಾಶ್ಚಂದ್ರ ನಿಡ್ಯ ಮತ್ತು ಹಿತಾ ಭರತ್ ನಿಡ್ಯ ಭಾಗವಹಿಸಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಯನಾ ಜಯಾನಂದ ಮತ್ತು ಪೂರ್ಣಿಮಾ ಎಸ್.ಶೆಟ್ಟಿ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕೋಡಿಂಬಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಲತಾ ಬಾಬು ಗೌಡ ಭಂಡಾರದಮನೆರವರು ಆಟೋಟ ಸ್ಪರ್ಧೆ ನಡೆಸಿಕೊಟ್ಟರು. ಹರಿಣಿ ರಮೇಶ್ ಭಂಡಾರಿ ಕೈಪ ಆಟಿಯ ಕುರಿತು ಹಾಡು ಹಾಡಿದರು. ಕೊನೆಗೆ ಪೂರ್ಣಿಮಾ ಶೆಟ್ಟಿ ಮತ್ತು ಬಳಗದವರು ಚೆನ್ನೆಮಣೆ ಆಟ ಆಡಿದರು.‌ ಆಟಿಯ ವಿಶೇಷ ತಿಂಡಿ ತಿನಿಸುಗಳೊಂದಿಗೆ ಔತಣ ಕೂಟ ನಡೆಯಿತು. ಆಟಿ ಕುರಿತ ಭಾಷಣ ಸ್ಪರ್ಧೆಯಲ್ಲಿ ಮಾನ್ವಿ ಮತ್ತು ಕೌಶಿಕ್ ಪ್ರಥಮ, ಸುಪ್ರೀತಾ ಮತ್ತು ಗೌತಮಿ ದ್ವಿತೀಯ ಬಹುಮಾನ ಪಡೆದರು. ಆಟಿ ತಿನಿಸು ಸ್ಪರ್ಧೆಯಲ್ಲಿ ರಾಧಿಕಾ ಆರ್.ಸಾಮಂತ್ ನೆಕ್ಕರಾಜೆ ಪ್ರಥಮ, ದೇಜಮ್ಮ ಹೆಗ್ಡೆ ಮತ್ತು ಪೂರ್ಣಿಮಾ ಎಸ್.ಶೆಟ್ಟಿ ಹೆಗ್ಡೆಹಿತ್ಲು ದ್ವಿತೀಯ ಹಾಗೂ ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ ತೃತೀಯ ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here