ಶಿವಳ್ಳಿ ಸಂಪದದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಆಟಿ ಆಚರಣೆ

0

ಪುತ್ತೂರು : ಶಿವಳ್ಳಿ ಸಂಪದ ದರ್ಬೆ ವಲಯ ಮತ್ತು ಮಹಿಳಾ ಸಂಪದ ವತಿಯಿಂದ ದರ್ಬೆ ಪರ್ಲಡ್ಕ ಬಹುವಚನಂ ಮನೆಯಲ್ಲಿ ಅದ್ಯಕ್ಷೆ ವಸಂತಲಕ್ಷ್ಮಿಯವರ ಅಧ್ಯಕ್ಷತೆಯಲ್ಲಿ ವಿಷ್ಣು ಸಹಸ್ರನಾಮ ಸ್ತ್ರೊತ್ರ ಪಠಣ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಆಟಿ ಆಚರಣೆ ನಡೆಯಿತು.

ಭಾರತ ಮಾತೆಗೆ ಮತ್ತು ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ತಾಲೂಕು ಅಧ್ಯಕ್ಷ ದಿವಾಕರ ಕೆ. ನಿಡ್ಡುಣ್ಣಾಯರು ಸಾಂಪ್ರದಾಯಿಕ ತೆಂಗಿನ ಹಿಂಗಾರ ಅರಳಿಸಿ, ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿದರು. ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ರಾಘವೇಂದ್ರ ಪ್ರಸಾದ್ ಎಂ.ಕೆ.ರವರನ್ನು ಗೌರವಿಸಲಾಯಿತು. ಶ್ರೀಶಕುಮಾರ್‌ರವರು ಮಾತನಾಡಿ ಆಟಿ ಆಚರಣೆ ಎಂದರೆ ಸಂಭ್ರಮವಲ್ಲ. ಹಿಂದಿನ ಕಷ್ಟದ ದಿನದ ನೆನಪು ಎಂದರು. ಸದಸ್ಯರು ಮನೆಯಲ್ಲಿ ತಯಾರಿಸಿದ ಸುಮಾರು ಇಪ್ಪತ್ತಕ್ಕು ಹೆಚ್ಚು ಬಗೆಯ ದೇಸಿ ಖಾದ್ಯದ ರುಚಿಯನ್ನು ಎಲ್ಲರೂ ಸವಿದರು. ಕಾರ್ಯದರ್ಶಿ ಗುರುರಾಜ್ ಕೊಳತ್ತಾಯ, ಕೋಶಾಧಿಕಾರಿ ರಾಮ್‌ಮೋಹನ್ ಆಚಾರ್, ಮಹಿಳಾ ಅಧ್ಯಕ್ಷೆ ವೀಣಾ ತಂತ್ರಿ, ಕಾರ್ಯದರ್ಶಿ ರಮಾ ಆಚಾರ್, ತಾಲೂಕು ಕಾರ್ಯದರ್ಶಿ ಸತೀಶ್ ಕೆದಿಲಾಯ, ನಿಕಟಪೂರ್ವ ಅಧ್ಯಕ್ಷ ನರಸಿಂಹ ಶಗ್ರಿತ್ತಾಯರು, ಜಯಲಕ್ಷ್ಮಿ ದಾಳಿಂಬ, ರೇವತಿ ಸಾಲ್ಮರ,ಸೇರಿದಂತೆ ವಲಯದ ಸುಮಾರು ೫೦ ಜನ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here