ಆ.20: ರಾಮಕುಂಜದಲ್ಲಿ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದ ಕಂಪ್ಯೂಟರ್ ತರಬೇತಿ ಕೇಂದ್ರ, ಟ್ಯೂಷನ್ ಸೆಂಟರ್ ಶುಭಾರಂಭ

0

ರಾಮಕುಂಜ: ಕಡಬ ತಾಲೂಕಿನ ಆಲಂಕಾರು ಗ್ರಾಮದ ಆಲಂಕಾರು ಶ್ರೀ ದುರ್ಗಾಟವರ‍್ಸ್‌ನಲ್ಲಿರುವ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ(ಟ್ಯೂಷನ್ ಸೆಂಟರ್), ಹೈ-ಟೆಕ್ ಕಂಪ್ಯೂಟರ್ ಎಜುಕೇಷನ್ ಇದರ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಟ್ಯೂಷನ್ ಸೆಂಟರ್‌ನ ರಾಮಕುಂಜ ಶಾಖೆಯು ರಾಮಕುಂಜ ಗ್ರಾಮ ಪಂಚಾಯತ್ ಸಮೀಪದಲ್ಲಿರುವ ಶಿವಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಆ.20ರಂದು ಬೆಳಿಗ್ಗೆ 8.30ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಬಿ.ಎಲ್.ಜನಾರ್ದನ ಹಾಗೂ ಪ್ರಾಂಶುಪಾಲರಾದ ರಾಘವೇಂದ್ರ ಮುಚ್ಚಿಂತಾಯರವರು ತಿಳಿಸಿದ್ದಾರೆ.

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಶಾಖೆ ಉದ್ಘಾಟಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್‌ರವರು ಕಂಪ್ಯೂಟರ್ ಕೇಂದ್ರ ಉದ್ಘಾಟಿಸಲಿದ್ದಾರೆ. ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲ್, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಕೊಯಿಲ ಗ್ರಾ.ಪಂ.ಮಾಜಿ ಸದಸ್ಯ ಸುಲೈಮಾನ್, ಶಿವಪ್ರಸಾದ್ ಕಾಂಪ್ಲೆಕ್ಸ್ ಮಾಲಕ ಬಾಲಕೃಷ್ಣ ಬಿ. ಬುಡಲ್ಲೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 2021ರ ಜ.22ರಂದು ಆಲಂಕಾರು ಶ್ರೀ ದುರ್ಗಾ ಟವರ‍್ಸ್‌ನಲ್ಲಿ ಆರಂಭಗೊಂಡ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಅದೇ ವರ್ಷದ ಫೆ.24ರಂದು ಕಡಬದಲ್ಲಿ ಮೊದಲ ಶಾಖೆ ಆರಂಭಿಸಿತ್ತು. ಇದೀಗ ರಾಮಕುಂಜದಲ್ಲಿ 2ನೇ ಶಾಖೆ ಆರಂಭಿಸುತ್ತಿದೆ. ಈ ಸಂಸ್ಥೆಯಲ್ಲಿ 7,8,9ನೇ ತರಗತಿ ಅನುತ್ತೀರ್ಣರಾದವರಿಗೆ ನೇರವಾಗಿ ಎಸ್‌ಎಸ್‌ಎಲ್‌ಸಿ, ಪ್ರಥಮ ಪಿಯುಸಿ ಅನುತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಆಯಾಯ ವಿಷಯಕ್ಕೆ ಸಂಬಂಽಸಿದಂತೆ ಪ್ರತ್ಯೇಕ ಟ್ಯೂಷನ್ ನೀಡಲಾಗುತ್ತಿದೆ. ಪ್ರತೀ ದಿನ( ರಜಾ ದಿನಗಳಲ್ಲಿಯೂ) ಎಲ್‌ಕೆಜಿ ಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ (ಆಂಗ್ಲ ಮತ್ತು ಕನ್ನಡ ಮಾಧ್ಯಮ) ಎಲ್ಲಾ ವಿಷಯಗಳಿಗೆ ಟ್ಯೂಷನ್, ನವೋದಯ ಪ್ರವೇಶ ಪರೀಕ್ಷೆಗೆ ವಿಶೇಷ ಕೋಚಿಂಗ್ ನೀಡಲಾಗುತ್ತಿದೆ. 3 ತಿಂಗಳ, 6 ತಿಂಗಳ ಹಾಗೂ 1 ವರ್ಷದ (ಬೇಸಿಕ್, ಡಿಟಿಪಿ, ಪಿಜಿಡಿಸಿಎ, ಸಿಐಟಿಸಿ) ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮಲ್ಲಿ ಕೋಚಿಂಗ್ ಪಡೆದುಕೊಂಡು 2021 ಹಾಗೂ 22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಸಂಸ್ಥೆಗೆ ಶೇ.100 ಫಲಿತಾಂಶ ಬಂದಿದೆ. ಅಲ್ಲದೇ ಇತರೇ ಶಾಲೆಗಳಲ್ಲಿ ರೆಗ್ಯುಲರ್ ತರಗತಿಗಳಿಗೆ ಹಾಜರಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ವಿವಿಧ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳು ನಮ್ಮಲ್ಲಿ 1 ತಿಂಗಳ ಕೋಚಿಂಗ್ ಪಡೆದುಕೊಂಡು ಪೂರಕ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮುಂದಕ್ಕೆ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್, ಕಡಬ ಶಾಖೆಯಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಸಂಚಾಲಕರಾದ ಬಿ.ಎಲ್.ಜನಾರ್ದನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here