ಮಾರ್ಕೆಟ್ ಬಳಿಯ ಹಲ್ಲೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು

0

ಪುತ್ತೂರು: ಮೀನು ಮಾರ್ಕೆಟ್ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕಬಕ ಗ್ರಾಮದ ನೆಹರುನಗರ ರಕ್ತೇಶ್ವರಿ ವಠಾರದಲ್ಲಿದ್ದು ಪ್ರಸ್ತುತ ಬನ್ನೂರು ನೆಕ್ಕಿಲು ಸಮೀಪ ವಾಸ್ತವ್ಯ ಇರುವ ಪ್ರಸಾದ್ ಶೆಟ್ಟಿ(36ವ)ರವರು ಜಾಮೀನು ಮಂಜೂರುಗೊಂಡ ಆರೋಪಿಯಾಗಿದ್ದಾರೆ. ಕರ್ಕುಂಜ ಶಿಂಗಾಣಿ ನಿವಾಸಿ ನಾಗೇಶ್ ಬಿ(32ವ)ರವರು ಜು.9ರಂದು ಮೀನು ಮಾರ್ಕೆಟ್ ಬಳಿ ಕೈಯಲ್ಲಿದ್ದ ಗುಟ್ಕಾ ಪ್ಯಾಕೇಟ್ ಕೆಳಗೆ ಬಿದ್ದಾಗ ಪ್ರಸಾದ್ ಎಂಬವರು ಅದಕ್ಕೆ ತುಳಿದಿದ್ದರು. ಈ ವೇಳೆ ನಾಗೇಶ್ ಅವರು ಗುಟ್ಕಾದಿಂದ ಕಾಲು ತೆಗೆಯುವಂತೆ ಪ್ರಸಾದ್ ಅವರಿಗೆ ತಿಳಿಸಿದಾಗ ಪ್ರಸಾದ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಮತ್ತು ಹಲ್ಲೆ ತಡೆಯಲು ಬಂದ ನಾಗೇಶ್ ಅವರ ಪತ್ನಿಯನ್ನು ದೂಡಿದ ಹಾಗೂ ಜೀವ ಬೆದರಿಕೆಯೊಡ್ಡಿದ ಕುರಿತು ಆರೋಪ ವ್ಯಕ್ತವಾಗಿತ್ತು. ಘಟನೆಗೆ ಸಂಬಂಽಸಿ ಪೊಲೀಸರು ಆರೋಪಿ ಪ್ರಸಾದ್ ಶೆಟ್ಟಿಯವರನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಽಸಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಹರೀಶ್ ಬಳಕ್ಕ, ದೀಪಕ್ ಬೊಳುವಾರು, ಅಕ್ಷತಾ ಪಿ ವಾದಿಸಿದರು.

LEAVE A REPLY

Please enter your comment!
Please enter your name here