ಅಡಿಕೆ ಕನಿಷ್ಠ ಆಮದು ಬೆಲೆ ಹೆಚ್ಚಳಕ್ಕೆ ಮನವಿ: ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳ ಪ್ರಮುಖರು ದೆಹಲಿಗೆ ಭೇಟಿ

0

ಪುತ್ತೂರು: ಮಂಜಪ್ಪ ಹೊಸಬಾಳೆ ಹಾಗೂ ರಮೇಶ ವೈದ್ಯರ ನೇತೃತ್ವದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಯವರು ಹಾಗೂ ವಿವಿಧ ಸಹಕಾರಿ ಸಂಘಗಳ ಸದಸ್ಯರನ್ನೊಳಗೊಂಡ ನಿಯೋಗ ಆ. 17ರಂದು ದೆಹಲಿಯಲ್ಲಿ ಕೆಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರನ್ನು ಭೇಟಿ ಮಾಡಿತು. ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆ.ಜಿಗೆ 360 ರೂಪಾಯಿಗೆ ನಿಗದಿಪಡಿಸುವಂತೆ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು. ಕೇಂದ್ರ ಸರಕಾರ 2017ರಲ್ಲಿ ಕನಿಷ್ಠ ಆಮದು ಬೆಲೆಯನ್ನು ಕೆ.ಜಿಗೆ 251 ರೂಪಾಯಿಗೆ ನಿಗದಿ ಪಡಿಸಿತ್ತು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಹೆಚ್ .ಎಮ್.ಕೃಷ್ಣ ಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ತುಮ್ಕೋಸ್ ಅಧ್ಯಕ್ಷ ಆರ್.ಎಮ್.ರವಿ,ಕ್ಯಾಂಪ್ಕೊ ನಿರ್ದೇಶಕರು ಮತ್ತು ರಾಜ್ಯ ಸಹಕಾರ ಭಾರತಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ, ಟಿಎಸ್‌ಎಸ್‌ನ ನಿರ್ದೇಶಕ ಶಶಾಂಕ್ ಎಸ್. ಹೆಗಡೆ ಹಾಗೂ ಮಹಾಮಂಡಳದ ನಿರ್ದೇಶಕ ಶಿವಕುಮಾರ್ ನಿಯೋಗದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here