ಸ್ವಚ್ಛತೆಯ ಜೊತೆ ನಗರ ಸೌಂದರ್ಯಕರಣದತ್ತ ಹೆಜ್ಜೆಯಿಟ್ಟ ನಗರಸಭೆ

0

ಆ.20: ನೆಲಪ್ಪಾಲಿನಲ್ಲಿ ’ನೆಲಪ್ಪಾಲು ಉದ್ಯಾನ’ ಲೋಕಾರ್ಪಣೆ

ಪುತ್ತೂರು: ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತೆಯಲ್ಲಿ ಪುತ್ತೂರು ನಗರಸಭೆ ೩ನೇ ಸ್ಥಾನಕ್ಕೆ ಏರುವ ಮೂಲಕ ಪುತ್ತೂರು ನಗರಸಭೆಯನ್ನು ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಮಾದರಿಯಾಗಿಸುವ ಜೊತೆಗೆ ಪುತ್ತೂರಿನ ಸೌಂದರ್ಯಕರಣಕ್ಕೆ ಹೆಚ್ಚು ಒತ್ತು ನೀಡಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರಿಂದ ಪುತ್ತೂರಿನ ವಿವಿಧ ಕಡೆ 15ನೇ ಹಣಕಾಸು ಮತ್ತು ನಗರಸಭೆ ಅನುದಾನದಲ್ಲಿ ಉದ್ಯಾನ ನಿರ್ಮಾಣ ಮಾಡುತ್ತಿದ್ದು, ಆ.20ರಂದು ಸಂಜೆ ನೆಲಪ್ಪಾಲಿನಲ್ಲಿ ನೂತನ ನೆಲಪ್ಪಾಲು ಉದ್ಯಾನ ಲೋಕಾರ್ಪಣೆಗೊಳ್ಳಲಿದೆ.

ರೂ. 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೆಲಪ್ಪಾಲು ಉದ್ಯಾನವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ., ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುತ್ತೂರಿನಲ್ಲಿ 7 ಸುಸಜ್ಜಿತ ಪಾರ್ಕ್‌ಗಳು

ನಗರ ಸೌಂದರ್ಯದಿಂದ ಕೂಡಿರಬೇಕಾದರೆ ಅಲ್ಲಿ ಒಂದಷ್ಟು ಪಾರ್ಕ್‌ಗಳು ಅಗತ್ಯ. ಸಾರ್ವಜನಿಕರಿಗೆ ವಿಶ್ರಾಂತಿಯ, ಉತ್ತಮ ವಾತಾವರಣ ಸಿಗುವಂತಹ ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ ಕೊಂಬೆಟ್ಟಿನಲ್ಲಿ ಅಟಲ್ ಉದ್ಯಾನ, ಕೋರ್ಟ್ ರಸ್ತೆಯಲ್ಲಿ ಚಿಣ್ಣರಪಾರ್ಕ್, ಸಾಮೆತ್ತಡ್ಕದಲ್ಲಿ, ನೆಲ್ಲಿಕಟ್ಟೆಯಲ್ಲಿ ಪಾರ್ಕ್‌ಗಳ ನಿರ್ಮಾಣ ಆಗಿದೆ.

ಕೆ.ಜೀವಂಧರ್ ಜೈನ್ ಅಧ್ಯಕ್ಷರು
ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here