ಪುತ್ತೂರು: ಉರ್ಲಾಂಡಿ ಶ್ರೀಸತ್ಯನಾರಾಯಣ ಬಾಲಗೋಕುಲ ವತಿಯಿಂದ ಆ.21ರಂದು ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯ ವಠಾರದಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮ ನಡೆಯಿತು. ನಾಯರಡ್ಕದಿಂದ ಉರ್ಲಾಂಡಿ ಸತ್ಯನಾರಾಯನ ಕಟ್ಟೆಯವರೆಗೆ ನಡೆದ ಮೆರವಣಿಗೆಯನ್ನು ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು ಉದ್ಘಾಟಿಸಿ ಶುಭಹಾರೈಸಿದರು. ಬಳಿಕ ಸಾರ್ವಜನಿಕರಿಗೆ ಮಡಿಕೆ ಒಡೆಯುವ ಸ್ಪರ್ಧೆ ನಡೆದು ಸಭಾ ಕಾರ್ಯಕ್ರಮ ನಡೆಯಿತು. ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಅಚ್ಯುತ್ ನಾಯಕ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಹೆಗ್ಡೆ ಬಪ್ಪಳಿಗೆ, ಸತ್ಯನಾರಾಯಣ ಕಟ್ಟೆಯ ಕಾರ್ಯದರ್ಶಿ ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು. 20 ಮಕ್ಕಳು ರಾಧಾಕೃಷ್ಣರ ವೇಷಧಾರಿಯಾಗಿದ್ದರು. ಬಳಿಕ ಭಜನೆ, ವಿವಿಧ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ನಡೆಯಿತು.
ಪುಟಾಣಿಗಳಾದ ಕಿಶನ್, ಶ್ರೇಯಸ್, ಶ್ರೀಕಾಂತ್ ತನ್ಮಯ್, ರಜನೀಶ್, ಭೂಮಿಕಾ, ಯತಿನ್, ರಿಶಿತ್, ಹನ್ಸಿಕಾ, ಯಶನ್, ಪ್ರಖ್ಯಾತ, ಪೂರ್ಣವಂಶಿ, ಲವಿತ್, ತೇಜಸ್, ತನುಷ್‌ರವರಿಗೆ ಶ್ರೀಮತಿ ಹೆಗ್ಡೆಯವರು ಭಗವದ್ಗೀತಾ ಪುಸ್ತಕ ಮತ್ತು ಅಶೋಕ ಹೆಗ್ಡೆ ಬನ್ನೂರು ತಾಳ ನೀಡಿ ಗೌರವಿಸಿದರು. ಉತ್ತಮ ಸಾಧನೆ ಮಾಡಿದ ನಾಯರಡ್ಕದ ಶರತ್‌ರವರನ್ನು ಸನ್ಮಾನಿಸಲಾಯಿತು.
ಪ್ರಿಯಾ, ಮೀನಾಕ್ಷಿ, ಸರಿತಾ, ಕಲಾವತಿ, ಜಯಲಕ್ಷ್ಮಿ, ಸುಮಾವತಿ, ಕವಿತಾ, ವಿಮಲಾ, ಯಶೋಧ, ಪವಿತ್ರ, ಪ್ರಮೋದ್, ಪ್ರಶಾಂತ್, ಸುಮತಿ, ಅಮಿತಾ, ಚೈತ್ರ, ಲೋಕೇಶ, ಪ್ರಸನ್ನ, ಶರತ್, ದೀಕ್ಷಿತ್, ದೇವೇಂದ್ರ ಹೆಗ್ಡೆ, ಭಾಸ್ಕರ್ ಹೆಗ್ಡೆ, ಸಚಿದೇವಿ ಜಯಶ್ರೀ, ಸುಂದರಿ, ಅಣ್ಣು, ಚಂದ್ರಿಕಾ, ಜಯರಾಮ, ಚಿದಾನಂದ, ವಿವೇಕ್ ಹೆಗ್ಡೆ, ವಿನೋದ್, ಮಾಧವ, ಮಹೇಶ, ಶ್ರಾವಣಿ, ಪ್ರಮೋದ್ ಮಾಡಾವು, ಅಖಿಲ, ಶೇಷಪ್ಪ ಗೌಡ, ಸಂತೋಷ್, ಪ್ರವೀಣ್, ಗಣೇಶ, ಜಾನಕಿ, ವಿಮಲಾ, ತನಿಯಪ್ಪ, ಸುರೇಶ್, ಶುಭ, ಬಾಳಪ್ಪ ಯಶೋಧ, ಗಿರಿಜಾ ಉಪಸ್ಥಿತರಿದ್ದರು. ಶ್ರೇಯಸ್ ಸ್ವಾಗತಿಸಿ, ಚೇತನ ವಿವೇಕ್ ಹೆಗ್ಡೆ ವಂದಿಸಿದರು. ಜಯಶ್ರೀ ಶಿವರಾಂ ಕಾರ್ಯಕ್ರಮ ನಿರೂಪಿಸಿದರು.