ವಿಟ್ಲ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಮೋರಿಗೆ ಡಿಕ್ಕಿಹೊಡೆದು ಚರಂಡಿಗುರುಳಿದ ಘಟನೆ ಆ.21ರಂದು ರಾತ್ರಿ ವಿಟ್ಲ- ಪುತ್ತೂರು ರಸ್ತೆಯ ಚಂದಳಿಕೆ ಶಾಲೆಯ ಬಳಿ ನಡೆದಿದೆ.
ವಿಟ್ಲದ ಶಾಲಾ ರಸ್ತೆಯಲ್ಲಿರುವ ಶಿಲ್ಪಿ ಸ್ಟುಡಿಯೋದ ಮಾಲಕ ಸದಾಶಿವ ಬನರವರ ಮಾಲಕತ್ವದ ಕಾರು ಇದಾಗಿದ್ದು, ಕಾರಿನಲ್ಲಿದ್ದ ಮೂವರು ಸೀಟ್ ಬೆಲ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.