ದರ್ಬೆ ವಿಶ್ಮ ಟೈಲರ್ಸ್ ಮಾಲಕ ವಾಸುದೇವ ಆಚಾರ್ಯ‌ ನಿಧನ

0

ಪುತ್ತೂರು: ಪರ್ಲಡ್ಕದ ಕೋಡಿಜಾಲ್ ನಿವಾಸಿ, ದರ್ಬೆ ವಿಶ್ಮ ಟೈಲರ್ಸ್ ಮಾಲಕ ವಾಸುದೇವ ಆಚಾರ್ಯ (68 ವ.)ರವರು ಆ. 22ರಂದು ಬೆಳಿಗ್ಗೆ 4ಗಂಟೆ ಸುಮಾರಿಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ರಾಯಲ್ ಆಫ್ ಒಮಾನ್ ನ ಪೊಲೀಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಟೈಲರಿಂಗ್ ವೃತ್ತಿ ನಿರ್ವಹಿಸಿದ ಇವರು ಬಳಿಕ ಊರಿಗೆ ಹಿಂದಿರಿಗಿ ದರ್ಬೆಯಲ್ಲಿ ವಿಶ್ಮ ಲೇಡಿಸ್ ಟೈಲರಿಂಗ್ ಸಂಸ್ಥೆ ಆರಂಭಿಸಿದ್ದರು. ಮೃತರು ಪತ್ನಿ ಶಾಂತಾ, ಮಗಳು ವಿಶ್ಮಾ, ಅಳಿಯ, ಮೊಮ್ಮಗನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here