- ದೇವಸ್ಥಾನಗಳ ಅಭಿವೃದ್ಧಿಯ ಜೊತೆಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತಾಗಲೂ ಗ್ರಾಮದ ಜನರು ಸಹಕಾರ ಅಗತ್ಯ: ರಾಜೇಶ್ ನಾಯ್ಕ್ ಉಳಿಪ್ಪಾಡಿ
ವಿಟ್ಲ: ಮಾಣಿ ದೈವಸ್ಥಾನದ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ 2 ಕೋಟಿ ಅನುದಾನ ಒದಗಿಸಿದ್ದೇನೆ, ಆದರೆ ಇನ್ನಷ್ಟು ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವುದಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು.
ಅವರು ಆ.೨೩ರಂದು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ 2 ಕೋಟಿ ಅನುದಾನದಲ್ಲಿ ಮಾಣಿ ಉಳ್ಳಾಲ್ತಿ ಮಾಡ ರಸ್ತೆ ರಸ್ತೆ ಅಭಿವೃದ್ಧಿ ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದಾರ್ಮಿಕ ಕೇಂದ್ರ ಗಳು ಅಭಿವೃದ್ದಿಯಾದರೆ ಅಲ್ಲಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಗ್ರಾಮಸ್ಥರೇ ಉಪಸ್ಥಿತರಿದ್ದು ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸಬೇಕೆಂದು ಅವರು ಹೇಳಿದರು. ದೈವಸ್ಥಾನ ಹಾಗೂ ದೇವಸ್ಥಾನಗಳ ಅಭಿವೃದ್ಧಿಯ ಜೊತೆಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತಾಗಲೂ ಗ್ರಾಮದ ಜನರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.
ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಹಿಂದೂ ಸಂಸ್ಕೃತಿಗೆ ಬೆಲೆಕೊಡುವ ವ್ಯಕ್ತಿ ನಮ್ಮ ಶಾಸಕರು, ಆದ್ದರಿಂದ ಅವರ ಕ್ಷೇತ್ರದಲ್ಲಿ ದೈವಸ್ಥಾನ, ದೇವಸ್ಥಾನಗಳ ಅಭುವೃದ್ಧಿ ಕೆಲಸಗಳೆಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಶಾಸಕರು ರಾಷ್ಟ್ರ ಸೇವೆ, ದೇವರ ಸೇವೆ ,ಜನ ಸೇವೆ ಮಾಡುತ್ತಿದ್ದು ಮುಂದಿನ ಅವಧಿಯಲ್ಲಿ ಅವರಿಗೆ ಸಹಕಾರ ನೀಡಿ ಎಂದು ಅವರು ಹೇಳಿದರು.
ಮಾಣಿ ಶ್ರೀಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಗುತ್ತು,ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ದೇವದಾಸ್ ಶೆಟ್ಟಿ, ಡೊಂಬಯ್ಯ ಅರಳ , ರವೀಶ್ ಶೆಟ್ಟಿ ಕರ್ಕಳ, ಸುದರ್ಶನ್ ಬಜ, ಮಾಧವ ಮಾವೆ, ಸಂತೋಷ್ ಶೆಟ್ಟಿ ಅರೆಬೆಟ್ಟು, ಸಂದೇಶ್ ಅರೆಬೆಟ್ಟು, ಕಮಲಾಕ್ಷಿ ಪೂಜಾರಿ, ಗಣೇಶ್ ರೈ ಮಾಣಿ, ಹರೀಶ್ ಮಾಣಿ, ಗೀತಾಚಂದ್ರಶೇಖರ್, ಪುಷ್ಪರಾಜ ಚೌಟ, ತನಿಯಪ್ಪ ಗೌಡ ನೇರಳಕಟ್ಟೆ,ಸುಬ್ರಮಣ್ಯ ಭಟ್, ಆನಂದ ಕುಲಾಲ್, ಹರೀಶ್ ಶೆಟ್ಟಿ ಪೆರಾಜೆ, ವಿನೀತ್ ಶೆಟ್ಟಿ ಪೆರಾಜೆ, ಮಹೇಂದ್ರ ಪೆರಾಜೆ, ನಂದರಾಮ ರೈ, ರಮನಾಥ ರಾಯಿ, ಆನಂದ ಶಂಭೂರು, ಪುರುಷೋತ್ತಮ ಸಾಲಿಯಾನ್, ಸನತ್ ಕುಮಾರ್ ರೈ ಅನಂತಾಡಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಮಾಣಿ ಗ್ರಾ.ಪಂ.ಸದಸ್ಯರಾದ ನಾರಾಯಣ ಶೆಟ್ಟಿ, ತೋಟ, ಅನಂತಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಟ್ರಿಂಜ ಮೊದಲಾದವರು ಉಪಸ್ಥಿತರಿದ್ದರು.