- ಅಲ್ಟ್ರಾಸೌಂಡ್, ಎಕ್ಸರೇ, ಎಕೋ, ಟಿ.ಎಂ.ಟಿ ಸೇವೆಗಳು ಒಂದೇ ಸೂರಿನಡಿಯಲ್ಲಿ
ಪುತ್ತೂರು: ಪುತ್ತೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಿರುವ ದರ್ಬೆಯ ಉಷಾ ಮೆಡಿಕಲ್ಸ್‌ನರಿಂದ ಮತ್ತೊಂದು ಸೇವೆ ಎಂಬಂತೆ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನೂತನ ತಂತ್ರಜಾನ, ಗುಣಮಟ್ಟದ ಖಾತರಿಯೊಂದಿಗೆ ಸುಸಜ್ಜಿತ ಅಲ್ಟ್ರಾಸೌಂಡ್, ಎಕ್ಸರೇ, ಎಕೋ ಹಾಗೂ ಟಿ.ಎಂ.ಟಿ ಸೇವೆಗಳು ಒಂದೇ ಸೂರಿನಡಿಯಲ್ಲಿ ಸೇವೆ ನೀಡುವ `ಉಷಾ ಸ್ಕ್ಯಾನಿಂಗ್ ಸೆಂಟರ್’ ಆ.೨೫ರಂದು ದರ್ಬೆ ಶ್ರೀರಾಮ ಸೌಧದಲ್ಲಿ ಶುಭಾರಂಭಗೊಳ್ಳಲಿದೆ.
ಮೆಡಿಕಲ್ಸ್ ಸೇವೆಯ ಮೂಲಕ ಕಳೆದ ೨೪ ವರ್ಷಗಳಿಂದ ಮನೆ ಮಾತಗಿರುವ ಉಷಾ ಮೆಡಿಕಲ್ಸ್ ಕಳೆದ ಎರಡು ವರ್ಷಗಳ ಹಿಂದೆ ಉಷಾ ಪಾಲಿಕ್ಲಿನಿಕ್ ಪ್ರಾರಂಭಿಸಿ ಎಲ್ಲಾ ತರದ ಚಿಕಿತ್ಸೆಗಳನ್ನು ಜನತೆ ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಮಾಡಿದ್ದಾರೆ. ಇದೀಗ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆಯಾಗಿ `ಉಷಾ ಸ್ಕ್ಯಾನಿಂಗ್ ಸೆಂಟರ್’ ಪ್ರಾರಂಭಿಸಿದ್ದು, ಇದರ ಮೂಲಕ ಜನತೆಗೆ ಕಿಡ್ನಿ, ಲಿವರ್, ಥೈರಾಯಿಡ್, ಮಧುಮೇಹ, ರಕ್ತದೊತ್ತಡ, ಹೃದಯ ಶ್ವಾಸಕೋಶ ತಪಾಸಣೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸ್ಕ್ಯಾನಿಂಗ್, ಎಕ್ಸ್‌ರೇ ಮೊದಲಾದ ತಪಾಸಣೆಗಳಿಗೆ ಜನರು ವಿವಿಧ ಕಡೆಗಳಿಗೆ ಅಲೆದಾಡಬೇಕಾಗಿಲ್ಲ. ನೂತನ ತಂತ್ರಜಾನ, ಗುಣಮಟ್ಟದ ಖಾತರಿಯೊಂದಿಗೆ ಸುಸಜ್ಜಿತ ಅಲ್ಟ್ರಾಸೌಂಡ್, ಎಕ್ಸರೇ, ಎಕೋ ಹಾಗೂ ಟಿ.ಎಂ.ಟಿ ಸೇವೆಗಳು ಉಷಾ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಒಂದೇ ಸೂರಿನಡಿಯಲ್ಲಿ ಪಡೆದುಕೊಳ್ಳಬಹುದಾದ ಅವಕಾಶವನ್ನು ಕಲ್ಪಸಲಾಗಿದೆ.
ಆ.25ರಂದು ಶುಭಾರಂಭ:
ಆ.೨೫ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಕ್ಯಾನಿಂಗ್ ಸೆಂಟರ್‌ನ್ನು ಹಿರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಉದ್ಘಾಟಿಸಲಿದ್ದಾರೆ. ಆಲ್ಟ್ರಾಸೌಂಡ್ ವಿಭಾಗವನ್ನು ಧನ್ವಂತರಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ರವಿಪ್ರಕಾಶ್ ಕಜೆ ಉದ್ಘಾಟಿಸಲಿದ್ದಾರೆ. ಎಕ್ಸ್‌ರೇ ವಿಭಾಗವನ್ನು ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರು, ಹಿರಿಯ ಕೀಲು ಮತ್ತು ಎಲುಬು ಶಸ್ತ್ರಚಿಕಿತ್ಸಾ ತಜ್ಞ ಡಾ.ಭಾಸ್ಕರ್ ಎಸ್. ಉದ್ಘಾಟಿಸಲಿದ್ದಾರೆ. ಟಿ.ಎಂ.ಟಿ ವಿಭಾಗವನ್ನು ಪ್ರಗತಿ ಆಸ್ಪತ್ರೆಯ ಪ್ರೊಫೆಸರ್ ಆಫ್ ಮೆಡಿಸಿನ್ ಹಿರಿಯ ಹೃದ್ರೋಗ ತಜ್ಞ ಡಾ.ಶ್ರೀಪತಿ ರಾವ್ ಉದ್ಘಾಟಿಸಲಿದ್ದಾರೆ. ಐ.ಎಂ.ಎ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಶುಭಾರಂಭವ ವಿಶೇಷ ಕೊಡುಗೆಗಳು:
ನೂತನ ಸಂಸ್ಥೆಯ ಶುಭಾರಂಭದ ಕೊಡುಗೆಗಳನ್ನು ನೀಡುತ್ತಿದೆ. ಕಂಪ್ಲೀಟ್ ಬ್ಲಡ್ ಕೌಂಟ್(ಸಿಬಿಸಿ), ಫಾಸ್ಟಿಂಗ್ ಬ್ಲಡ್ ಶುಗರ್(ಎಫ್‌ಬಿಸಿ), ಸಿರಂ ಕ್ರಿಯೇಟಿನೈನ್, ಸಿರಂ ಕ್ಯಾಲ್ಸಿಯಂ, ಸಿರಂ ಯೂರಿಕ್ ಆಸಿಡ್, ಲಿಪಿಡ್ ಪ್ರೊಫೈಲ್ ಟೆಸ್ಟ್, ಲಿವರ್ ಫಕ್ಷನ್ ಟೆಸ್ಟ್(ಎಲ್‌ಎಫ್‌ಟಿ), ಯೂರಿನ್ ರೂಟೀನ್, ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್(ಟಿಎಸ್‌ಎಚ್), ಇಸಿಎಚ್‌ಒ/ಟಿಎಂಟಿ, ರಕ್ತದ ಒತ್ತಡ(ಬಿಪಿ), ಚೆಸ್ಟ್ ಎಕ್ಸ್‌ರೇ(ವಿತೌಟ್ ಫಿಲ್ಮ್) ಹಾಗೂ ತಜ್ಞ ವೈದ್ಯರ ಸಲಹೆಗಳಿಗೆ ಸೇರಿದಂತೆ ಒಟ್ಟು ವೆಚ್ಚ ರೂ.4500 ಮೌಲ್ಯದ ತಪಾಸಣೆಯನ್ನು ಶುಭಾರಂಭದ ಕೊಡುಗೆಯಾಗಿ ಕೇವಲ ರೂ.2500ಕ್ಕೆ ಪಡೆಯಲು ಅವಕಾಶವಿದೆ. ಈ ಕೊಡುಗೆಗಳು ಆ.25ರಿಂದ ಸೆ.5ರ ತನಕ ಮಾತ್ರ ದೊರೆಯಲಿದೆ. ಮುಂಗಡ ಅಪಾಮೆಂಟ್‌ಗಾಗಿ ಮೊಬೈಲ್ 9008256005 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.