ಪುತ್ತೂರಿನಲ್ಲಿ ರಾಜ್ಯದ ಹಲವು ಆರ್‌ಎಸ್‌ಎಸ್ ಪ್ರಮುಖರ ಬೈಠೆಕ್: ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಮುಖರು

0

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯದ ವಿವಿಧ ಜವಾಬ್ದಾರಿ ಹೊಂದಿರುವ ಹಲವು ಪ್ರಮುಖರ ಬೈಠೆಕ್ ಪುತ್ತೂರು ವಿವೇಕಾನಂದ ಕಾಲೇಜು ಕ್ಯಾಂಪಸ್‌ನಲ್ಲಿ ಜರುಗಲಿರುವ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಲವು ಪ್ರಮುಖರು ಭೇಟಿ ನೀಡಿದರು.

ಆರ್‌ಎಸ್‌ಎಸ್ ಪ್ರಾಂತ ಸೇವಾಪ್ರಮುಖ್ ನಾ ಸೀತಾರಾಮ, ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್, ಸಂಘದ ಪ್ರಮುಖರಾದ ನ್ಯಾಯವಾದಿ ಶಿವಪ್ರಸಾದ್ ಇ, ರವೀಂದ್ರ ಸೇರಿದಂತೆ ಹಲವಾರು ಮಂದಿ ಆರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here