ನೆಲ್ಯಾಡಿ: ಜೀರ್ಣೋದ್ದಾರಗೊಳ್ಳುತ್ತಿರುವ ಹಳೆನೇರೆಂಕಿ ಸಮೀಪವಿರುವ ಬಜತ್ತೂರು ಗ್ರಾಮದ ಶ್ರೀ ಉಗ್ರನರಸಿಂಹ ಮಠ ಕೂವೆ ಮಠ(ಶಿವತ್ತಮಠ) ಇದರ ಮನವಿ ಪತ್ರವನ್ನು ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆ.24ರಂದು ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಸ್ವಾಮೀಜಿಯವರು ೧೦ಸಾವಿರ ರೂ.ದೇಣಿಗೆ ನೀಡಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವ ಸಲಹೆಗಾರರಾದ ರೋಹಿಣಿ ಸುಬ್ಬರತ್ನಂ ಕಾಂಚನ, ಮಾರ್ಗದರ್ಶಕರಾದ ನಾರಾಯಣ ಬಡೆಕ್ಕಿಲ್ಲಾಯ, ಅಧ್ಯಕ್ಷೆ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್, ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರ ವರ್ಮ ಮೇಲೂರು, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿಗಳಾದ ಮಹೇಶ ಪಾತೃಮಾಡಿ, ಆನಂದ ಮೇಲೂರು, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು, ಸದಸ್ಯರಾದ ಅಣ್ಣು ಗೌಡ ಶಿವತ್ತಮಠ, ವೀರೇಂದ್ರ ಜೈನ್ ಮೇಲೂರು, ದಿವಾಕರ ರಾವ್ ಪಂಚವಟಿ ರಾಮಕುಂಜ, ಶಾಂತಪ್ಪ ಗೌಡ ಮೇಲೂರು, ಜನಾರ್ದನ ಕದ್ರ, ಪ್ರಶಾಂತ್ ಆರ್.ಕೆ., ಶೇಖರ ಗೌಡ ಕಟ್ಟಪುಣಿ, ರಮೇಶ್ ರೈ ರಾಮಜಾಲು, ನಾರಾಯಣ ಶೆಟ್ಟಿ ಮೇಲೂರು, ಶಿವಣ್ಣ ಗೌಡ, ಪದ್ಮಯ್ಯ ಗೌಡ ಡೆಂಬಲೆ, ರಾಜೇಶ್ ಗೌಡ ಶಿವತ್ತಮಠ, ಲೋಕೇಶ್ ಗೌಡ ಬಜತ್ತೂರುಗುತ್ತು, ಓಬಯ್ಯ ಪರವ ಮೇಲೂರು, ಸುರೇಶ್ ಬಿದಿರಾಡಿ ಮತ್ತಿತರರು ಉಪಸ್ಥಿತರಿದ್ದರು.