ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ,ತಾಲ್ಲೂಕು ಪಂಚಾಯತ್ ಕಡಬ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ,ಗ್ರಾಮ ಪಂಚಾಯತ್ ರಾಮಕುಂಜ , ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಫ್ರೌಡಶಾಲೆ ರಾಮಕುಂಜ, ತಾಲ್ಲೂಕು ಯುವಜನ ಒಕ್ಕೂಟ (ರಿ) ಕಡಬ ಇದರ ಸಹಯೋಗದೊಂದಿಗೆ ಕಡಬ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆಪ್ಟೆಂಬರ್ 4 ರಂದು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ.ರಕ್ಷಣಾ ಪಡೆ ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.ಒಬ್ಬ ಕ್ರೀಡಾಪಟು ಅಥವಾ ತಂಡ ಒಂದು ತಾಲೂಕಿನಲ್ಲಿ ಭಾಗವಹಿಸಿದ ನಂತರ ಬೇರೆ ತಾಲೂಕಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.ಒಬ್ಬ ಕ್ರೀಡಾಪಟು 3 ಸ್ಪರ್ಧೆಯಲ್ಲಿ ಭಾಗವಹಿಸಬಹುದು,ಒಂದು ಟ್ರ್ಯಾಕ್ ಮತ್ತು ಎರಡು ಫೀಲ್ಡ್ ಅಥವಾ ಎರಡು ಟ್ರ್ಯಾಕ್ ಒಂದು ಫೀಲ್ಡ್.
ಬೆಳಗ್ಗೆ 8.30 ರ ಒಳಗೆ ತಂಡಗಳ ಇರುವಿಕೆ ಸ್ಪಷ್ಟಪಡಿಸತಕ್ಕದ್ದು ,9.30 ಕ್ಕೆ ಸರಿಯಾಗಿ Fixtures ಹಾಕಲಾಗುವುದು ನಂತರ ಬಂದ ತಂಡಗಳನ್ನು ಪರಿಗಣಿಸಲಾಗುವುದಿಲ್ಲ.
ಪುರುಷರ ವಿಭಾಗದ 5000 ಮೀ ಮತ್ತು ಮಹಿಳೆಯರ ವಿಭಾಗದ 3000 ಮೀ ಸ್ಪರ್ಧೆಯನ್ನು ಬೆಳಗ್ಗೆ 9 ಗಂಟೆಗೆ ನಡೆಸಲಾಗುವುದು.ಪುಟ್ಬಾಲ್ ಸ್ಪರ್ಧೆಯನ್ನು ಅದೇ ದಿನ ಫಿಲೋಮಿನ ಪದವಿ ಕಾಲೇಜಿನಲ್ಲಿ ನಡೆಸಲಾಗುವುದು.ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆ.3 ರ ಒಳಗಾಗಿ 9164502107 ಈ ವಾಟ್ಸಪ್ ನಂಬರ್ ಗೆ ತಮ್ಮ ತಂಡದ ಹೆಸರನ್ನು ಕಳುಹಿಸಿಕೊಡಬೇಕೆಂದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು ಪ್ರಕಟಣೆ ನೀಡಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಗಳು:
100 ಮೀ , 200 ಮೀ, 400 ಮೀ , 800 ಮೀ, 1500 ಮೀ ,5000 ಮೀ ಓಟ.ಉದ್ದ ಜಿಗಿತ,ಎತ್ತರ ಜಿಗಿತ,ಗುಂಡು ಎಸೆತ,ಟ್ರಿಪಲ್ ಜಂಪ್, ಜಾವೆಲಿನ್ ತ್ರೋ,ಡಿಸ್ಕಸ್ ತ್ರೋ,110 ಮೀ ಹರ್ಡಲ್ಸ್,4×100 ಮೀ ರಿಲೇ,4×400 ಮೀ ರಿಲೇ,ವಾಲಿಬಾಲ್, ತ್ರೋಬಾಲ್,ಪುಟ್ಬಾಲ್, ಖೋ ಖೋ,ಕಬಡ್ಡಿ,
ಮಹಿಳೆಯರ ವಿಭಾಗದ ಸ್ಪರ್ಧೆಗಳು
100 ಮೀ , 200 ಮೀ, 400 ಮೀ , 1500 ಮೀ ,3000 ಮೀ ಓಟ.ಉದ್ದ ಜಿಗಿತ,ಎತ್ತರ ಜಿಗಿತ,ಗುಂಡು ಎಸೆತ,ಟ್ರಿಪಲ್ ಜಂಪ್, ಜಾವೆಲಿನ್ ತ್ರೋ,ಡಿಸ್ಕಸ್ ತ್ರೋ,100 ಮೀ ಹರ್ಡಲ್ಸ್,4×100 ಮೀ ರಿಲೇ,4×400 ಮೀ ರಿಲೇ,ವಾಲಿಬಾಲ್, ತ್ರೋಬಾಲ್,ಪುಟ್ಬಾಲ್, ಖೋ ಖೋ,ಕಬಡ್ಡಿ.
ನೇರ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು :
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್,ಬ್ಯಾಡ್ಮಿಂಟನ್, ಹಾಕಿ,ಹ್ಯಾಂಡ್ ಬಾಲ್ ,ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ನೆಟ್ ಬಾಲ್ ,ಈಜು ನಡೆಯಲಿದೆ.