ಬಡಗನ್ನೂರು :ಮದಕ ಮೂಲಸ್ಥಾನದಲ್ಲಿ ಅನುಜ್ಞಾ ಕಲಶ ಕಾರ್ಯಕ್ರಮ

0

ಪುತ್ತೂರು : ಪಡುಮಲೆ  ವಿಷ್ಣುಮೂರ್ತಿ ದೇವರು ಕುರ್ಮಾವತಾರ ತಾಳಿದ ಮದಕ ಮೂಲಸ್ಥಾನದಲ್ಲಿ ರಾಜರಾಜೇಶ್ವರಿ ದೇವಿ ಗುಡಿ ನಿರ್ಮಾಣದ ಅಂಗವಾಗಿ  ಮದಕ ಮೂಲಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ  ಕುಂಟಾರು ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಅನುಜ್ಞಾ ಕಲಶ ಕಾರ್ಯಕ್ರಮ ಅ.29 ರಂದು ನಡೆಯಿತು.

ಪಡುಮಲೆ ಶ್ರೀ ಕೊವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು   ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂಚಿತವಾಗಿ ಮೂಲಸ್ಥಾನ ಅಭಿವೃದ್ಧಿ ಪಡಿಸಿ ಶ್ರೀ  ರಾಜರಾಜೇಶ್ವರಿ  ಗುಡಿ ನಿರ್ಮಾಣ ಮಾಡಬೇಕು.  ದೇವಸ್ಥಾನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ  ಮೂಲಸ್ಥಾನದಲ್ಲೂ ಶ್ರೀ ರಾಜರಾಜೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠೆಯಾಗಬೇಕು ಎಂದು ದೈವಜ್ಞರ ಚಿಂತನೆ ಪ್ರಕಾರ ಮದಕ ಮೂಲಸ್ಥಾನ ಅನುಜ್ಞಾ ಕಲಶ  ನೆರವೇರಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್, ಸಿ.ಯಾಚ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಭಟ್ ಬಿರ್ನೊಡಿ, ಚಂದ್ರಶೇಖರ ಆಳ್ವ ಗಿರಿಮನೆ, ಅಪ್ಪಯ್ಯ ನಾಯ್ಕ, ತಲೆಂಜಿ, ಪ್ರಭಾಕರ ಗೌಡ ಕನ್ನಯ,  ಪ್ರಧಾನ ಅರ್ಚಕ ಮಹಾಲಿಂಗ ಭಟ್ ,  ಉತ್ಸವ ಸಮಿತಿ ಸದಸ್ಯ ಬಸವ ಹಿತ್ತಲು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ  ವಿಷ್ಣು ಭಟ್ ಪಡ್ಪು , ಪ್ರಸಾದ ಭಟ್, ಪಟ್ಟೆ, ಅಸೀತ್ ರೈ, ಕುದುರೆ ಮಜಲು, ಪಟ್ಟೆ ವಲಯ ಸಮಿತಿ ಸಂಚಾಲಕ ವೈಕೆ ನಾಯ್ಕ, ಪಟ್ಟೆ, ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here