ಪುತ್ತೂರು ಪುತ್ತೂರು ಲೋಕೋಪಯೋಗಿ ಇಲಾಖೆ ಕಚೇರಿ ಕಟ್ಟಡದ ಬಳಿಯ ನಂದಿನಿ ಪಾರ್ಲರ್‌ನ ಮಾಲಕರಾಗಿದ್ದ ಪದ್ಮನಾಭ ನಾಯ್ಕ್(69ವ)ರವರು ಆ.27ರಂದು ಸಂಜೆ ಉರಿಮಜಲು ಸ್ವಗೃಹದಲ್ಲಿ ನಿಧನರಾದರು.
ಇಲ್ಲಿನ ಲೋಕೋಪಯೋಗಿ ಇಲಾಖೆಯ ಕಚೇರಿ ಕಟ್ಟಡದ ಬಳಿ ನಂದಿನಿ ಪಾರ್ಲರ್ ಮಾಲಕರಾಗಿ ಮತ್ತು ಪತ್ರಿಕಾ ವಿತರಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪದ್ಮನಾಭ ನಾಯ್ಕ್ ಅವರು ಮೂರು ತಿಂಗಳ ಹಿಂದೆ ತನ್ನ ವ್ಯವಹಾರವನ್ನು ಬೇರೊಬ್ಬರಿಗೆ ವಹಿಸಿ ಉರಿಮಜಲು ಮನೆಯಲ್ಲಿ ತೋಟದ ನಿರ್ವಹಣೆಯಲ್ಲಿ ತೊಡಗಿದ್ದರು. ಆ.27ರಂದು ಅವರು ಹೃದಯಾಘಾತದಿಂದ ನಿಧನರಾದರು.
ಮೃತರು ಗೋವಾದಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡಿರುವ ಪತ್ನಿ ಮೋಹಿನಿ ನಾಯ್ಕ್, ಮಂಗಳೂರು ನ್ಯೂ ಇನ್‌ಶ್ಯೂರೆನ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಪುತ್ರ ರೋಶನ್ ನಾಯ್ಕ್, ಮಂಗಳೂರು ಯೂನಿಯನ್ ಬ್ಯಾಂಕ್ ಅಧಿಕಾರಿಯಾಗಿರುವ ಪುತ್ರಿ ದೀಪ್ತಿ ನಾಯ್ಕ್ ಅವರನ್ನು ಅಗಲಿದ್ದಾರೆ.