ಪುತ್ತೂರು: ಶಾಂತಿಗೋಡು ಗ್ರಾಮದ ಕಲ್ಕಾರು ತರವಾಡು ಮನೆತನದ ದಿ.ಬಾಬು ಗೌಡರ ಪತ್ನಿ ಕುಟುಂಬದ ಹಿರಿಯರಾದ ಕೂಸಮ್ಮ (85 ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.29 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಈಶ್ವರ ಗೌಡ ಕಲ್ಕಾರು, ವಿಠಲ ಗೌಡ ಕಲ್ಕಾರು, ಆನಂದ ಗೌಡ ಕಲ್ಕಾರು, ಪುತ್ರಿಯರಾದ ರತ್ನಾವತಿ ಮಾಲೆತ್ತೋಡಿ, ದೇವಕಿ ಕೊಲ್ಯೋಟ್ಟು, ವೀಣಾ ಬನ್ನೂರು, ವೇದಾವತಿ ದೇಲಂಪಾಡಿ, ಪ್ರೇಮ ಕನ್ಯಾನ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.