ʼವೈಟ್‌ ಪ್ಯಾಲೇಸ್‌ ಡೆಕೋರ್‌ʼ ಇಂಟೀರಿಯರ್ಸ್‌ ಶುಭಾರಂಭ

0

ಪುತ್ತೂರು : ಇಲ್ಲಿನ ಬೈಪಾಸ್‌ ರಸ್ತೆಯಲ್ಲಿರುವ ಶ್ರೀ ಮಂಗಳಾ ಸಂಕೀರ್ಣದಲ್ಲಿ ʼವೈಟ್‌ ಪ್ಯಾಲೇಸ್‌ ಡೆಕೋರ್‌ʼ ಇಂಟೀರಿಯರ್ಸ್‌ ಆ.29ರಂದು ಬೆಳಿಗ್ಗೆ ಶುಭಾರಂಭಗೊಂಡಿದೆ. ನಗರಸಭಾ ಅಧ್ಯಕ್ಷ ಜೀವಂದರ್‌ ಜೈನ್‌ ದೀಪ ಬೆಳಗಿಸುವುದರ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವೆಂಕಟರಮಣ ಭಟ್‌ ಹಾರಕರೆ, ವಾಸ್ತುಶಿಲ್ಪಿ ಎ ಆರ್‌ ಸುದರ್ಶನ್‌ ಹಾರಕರೆ, ನಿತಿನ್‌ ಕುಮಾರ್‌, ಸಂತೋಷ್‌ ರೈ ಸಂಸ್ಥೆಗೆ  ಶುಭಹಾರೈಸಿದರು.  ಸಂಸ್ಥೆಯ ಮಾಲಕರಾದ ಸರ್ವೇಶ್‌, ವೀಕ್ಷಾ ದಂಪತಿ ಅತಿಥಿಗಳನ್ನು ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ  ಕುಟುಂಬಸ್ಥರು ಹಾಗೂ ಬಂಧು ಬಳಗದವರು ಭಾಗಿಯಾಗಿದ್ದರು.

ನಮ್ಮಲ್ಲಿ ಗೋಡೆಗಳನ್ನು ಒಳಗೊಂಡಂತೆ ಮನೆಯ ಒಳಾಂಗಣದ ವಿನ್ಯಾಸಕ್ಕೆ ಬಹುಮುಖ ವಸ್ತುವಾಗಿ ವಿವಿಧ ಬಣ್ಣಗಳು ಮತ್ತು ಆಕರ್ಷಕ ಇಂಟೀರಿಯರ್‌ ಡಿಸೈನ್‌ ಗಳೊಂದಿಗೆ ಒಳ ವಿನ್ಯಾಸಗಳನ್ನು ಮಾಡಿಕೊಡಲಾಗುವುದು.  ರೋಲ್ಲರ್‌ ಬ್ಲೈಂಡ್ಸ್‌, ಕರ್ಟೈನ್ಸ್‌, ಪಿವಿಸಿ ಬ್ಲೈಂಡ್ಸ್‌, ಝೀಬ್ರಾ ಬ್ಲೈಂಡ್ಸ್‌, ವುಡನ್‌ ಬ್ಲೈಂಡ್ಸ್‌, ವೆನೆಟಿಯನ್‌ ಬ್ಲೈಂಡ್ಸ್‌, ರೋಮನ್‌ ಬ್ಲೈಂಡ್ಸ್‌, ಕರ್ಟೈನ್ಸ್‌ ಟ್ರ್ಯಾಕ್ಸ್‌ & ರಾಡ್ಸ್‌, ಮಾನಸೂನ್‌ ಬ್ಲೈಂಡ್ಸ್‌, ಕಾರ್ಪೇಟ್ಸ್‌, ವೆರ್ಟಿಕಲ್‌ ಬ್ಲೈಂಡ್ಸ್‌, ಇಂಡಸ್ಟ್ರಿಯಲ್‌ ಬ್ಲೈಂಡ್ಸ್‌, ವಾಲ್‌ ಪ್ಯಾಪರ್ಸ್‌, ಸ್ಪೆಷಲೈಸ್ಡ್‌ ಇನ್‌ ಮೋಟರೈಸೇಷನ್‌ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9148897135, 9535038135

 

 

LEAVE A REPLY

Please enter your comment!
Please enter your name here