ಪಾಣಾಜೆ: ಪ್ರಾಥಮಿಕ ಆರೋಗ್ಯ ಕೇಂದ್ರ ಪಾಣಾಜೆ ಆಡಳಿತಕ್ಕೊಳಪಟ್ಟ ಕಬಕ ಉಪಕೇಂದ್ರ ಹಾಗೂ ವಿವಿದೆಡೆ 35 ವರ್ಷಗಳ ಕಾಲ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಮತ್ತು ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2021-22ನೇ ಸಾಲಿನ ಉತ್ತಮ ಕಾರ್ಯ ಸಾಧಕಿ ಪುರಸ್ಕೃತರಾಗಿರುವ ಬಿ.ಎಂ. ಶೋಭಾರವರು ತನ್ನ ೫೮ನೇ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಬಯಸಿ ಆ.31ರಂದು ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ. ಕೊರೋನಾ ನಿಯಂತ್ರಣ ಸೇವೆಯಲ್ಲಿ ಅತ್ಯುತ್ತಮ ಸೇವಾ ನಿರ್ವಹಣೆಯನ್ನು ತೋರಿದ್ದಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಪ್ರಶಂಸೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ. ಬಿ.ಎಂ. ಶೋಭಾರವರು ಕೆ.ಎಂ.ಸಿ. ಮಂಗಳೂರು ನಿವೃತ್ತ ಉದ್ಯೋಗಿ ಸುದರ್ಶನ್ ಗೌಡ ಪುತ್ತೂರು ಹಾಗೂ ಪುತ್ರಿ ಇನ್ಫೋಸಿಸ್ ಉದ್ಯೋಗಿ ಪುತ್ರನೊಂದಿಗೆ ಮುರ-ರಾಮನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ.