ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ ಹಾಗೂ ದ್ರವ್ಯಕಲಶ ಸೆ. 2ರಿಂದ 5ರವರೆಗೆ ನಡೆಯಲಿದೆ.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಸೆ. 2ರಂದು ಬೆಳಿಗ್ಗೆ 7.30ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಐಕ್ಯಮತ್ಯ ಹೋಮ, ಸರ್ಪಸಂಸ್ಕಾರ ಮಂಗಳ ಹೋಮ, ಆಶ್ಲೇಷ ಬಲಿ, ವಟು ಆರಾಧನೆ, ನಾಗ ತಂಬಿಲ, ದೈವಗಳಿಗೆ ತಂಬಿಲ, ಸರ್ವ ಪಾಯಶ್ಚಿತ್ತವಾಗಿ ಶ್ರೀ ದೇವರಿಗೆ ಭದ್ರದೀಪ ಸಮರ್ಪಣೆ, ಊರಿನ ಎಲ್ಲಾ ಭಕ್ತಾದಿಗಳಿಂದ ಮುಷ್ಠಿಕಾಣಿಕೆ ಸಮರ್ಪಣೆ, ನವಕ ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ. ಸಂಜೆ 5.30ರಿಂದ ದುರ್ಗಾಪೂಜೆ, ತ್ರಿಷ್ಟುಪ್ ಹೋಮ, ಅಘೋರ ಹೋಮ, ಮಹಾಸುದರ್ಶನ ಹೋಮ, ಆವಾಹನೆ, ಬಾಧಾಕರ್ಷಣೆ, ಉಚ್ಛಾಟನೆ, ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.
ಸೆ. 3ರಂದು ಬೆಳಿಗ್ಗೆ 7ಕ್ಕೆ ಮಹಾಗಣಪತಿ ಹೋಮ, ತಿಲ ಹೋಮ, ಪವಮಾನ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, ಬ್ರಾಹ್ಮಣ ಆರಾಧನೆ, ಸಾಯುಜ್ಯ ಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ. ಸಂಜೆ 5.30ರಿಂದ ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆ. 4ರಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ, ಬಿಂಬ ಶುದ್ಧಿ ಕಲಶ ಪೂಜೆ, ನವೀಕರಣ ಪ್ರಾಯಶ್ಚಿತ ಹೋಮ ಮಧ್ಯಾಹ್ನ 12ಕ್ಕೆ ಬಿಂಬ ಶುದ್ಧಿ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5ರಿಂದ ಮಂಟಪ ಶುದ್ಧಿ, ಕುಂಭೇಶ ಕರ್ಕರೀ ಪೂಜೆ, ಪರಿಕಲಶ ಪೂಜೆ, ದ್ರವ್ಯಕಲಶ ಪೂಜೆ, ಅಽವಾಸ ಹೋಮ, ಕಲಶಾಽವಾಸ, ಮಹಾಪೂಜೆ ಪ್ರಸಾದ ವಿತರಣೆ ಜರಗಲಿದೆ.
ಸೆ. 5ರಂದು ಬೆಳಿಗ್ಗೆ 6.30ರಿಂದ ಮಹಾಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ದ್ರವ್ಯಕಲಶಾಭಿಷೇಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.
ಸರ್ವ ಪ್ರಾಯಶ್ಚಿತ್ತವಾಗಿ ದೇವರ ಸನ್ನಿಽಯಲ್ಲಿ ಮುಷ್ಟಿಕಾಣಿಕೆ ಸಮರ್ಪಣೆ ನಡೆಯಲಿದ್ದು, ಪ್ರತಿ ಮನೆಯಿಂದಲೂ ಈ ಕಾರ್ಯದಲ್ಲಿ ತಪ್ಪದೇ ಭಾಗವಹಿಸಬೇಕು ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಧನಸಹಾಯದ ಜೊತೆಗೆ ಉತ್ತಮ ದರ್ಜೆಯ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಹಾಲು, ಬಾಳೆಹಣ್ಣು, ಸೀಯಾಳ, ಬಾಳೆಎಲೆ, ವೀಳ್ಯದೆಲೆ, ಅಡಿಕೆ, ಕದಿಕೆ, ತರಕಾರಿ, ತುಪ್ಪ, ಹೂವುಗಳು, ಹಿಂಗಾರ, ತುಳಸಿ, ಕೇಪುಳ ಹಾಗೂ ಇನ್ನಿತರ ಹೂವುಗಳ ಅಗತ್ಯವಿದ್ದು, ಭಕ್ತರಿಂದ ನಿರೀಕ್ಷಿಸಲಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಸುಧಾಕರ ರಾವ್ ಆರ್ಯಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.