ಆ.31-ಸೆ.6: ಪುತ್ತೂರು ಶ್ರೀದೇವತಾ ಸಮಿತಿಯಿಂದ ಕಿಲ್ಲೆ ಮೈದಾನದಲ್ಲಿ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ

0

ಪುತ್ತೂರು : ಶ್ರೀದೇವತಾ ಸಮಿತಿ ಪುತ್ತೂರು ಇದರ ವತಿಯಿಂದ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮ ಆ.31ರಿಂದ ಸೆ.6 ತನಕ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಕ್ರಮಗಳು: ಆ.31ರಂದು ಬೆಳಗ್ಗೆ 11.00ಕ್ಕೆ ಸಾಯಿ ಮಂದಿರದಿAದ ಹೊರಟು ಕಿಲ್ಲೆ ಮೈದಾನದ ಮಂಟಪದಲ್ಲಿ ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ 12.00ಕ್ಕೆ ಉದ್ಘಾಟನಾ ಸಮಾರಂಭ, ಸಂಜೆ 6 ರಿಂದ ಶ್ರೀಚಾಮುಂಡೇಶ್ವರಿ ಭಜನಾ ಸಂಘ, ಮೊಟ್ಟೆತಡ್ಕ ಇವರಿಂದ ಭಜನೆ, ರಾತ್ರಿ 7ರಿಂದ, ಆರ್ಯಭಟ ಅಂರ‍್ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನೃತ್ಯ ಗುರುಗಳಾದ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರ ನಿರ್ದೇಶನದಲ್ಲಿ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇವರಿಂದ ನೃತ್ಯಾರ್ಪಣ ನಡೆಯಲಿದೆ.

ಸೆ.1 ರಂದು ಬೆಳಗ್ಗೆ 11 ರಿಂದ ವಿಶ್ವಕರ್ಮ ಮಹಿಳಾ ಮಂಡಳಿ ಪುತ್ತೂರು ಇವರಿಂದ ಭಜನೆ, ಮಧ್ಯಾಹ್ನ 12 ರಿಂದ ರಘುನಾಥ ಅರಿಯಡ್ಕ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 6 ರಿಂದ ಗಾನಕೋಗಿಲೆ ಪುತ್ತೂರು ಚಂದ್ರಶೇಖರ ಹೆಗ್ಡೆ ಇವರ ನಿರ್ದೇಶನದ ಪುನೀತ್ ಆರ್ಕೆಷ್ಟ್ರಾ ಪುತ್ತೂರು ಇವರಿಂದ ನಾದ ನಿನಾದ – ಭಕ್ತಿ ಭಾವ ಜಾನಪದ ಗೀತೆಗಳ ಸಂಗೀತ ರಸಮಂಜರಿ ನಡೆಯಲಿದೆ.

ಸೆ.2 ರಂದು ಬೆಳಗ್ಗೆ 11 ರಿಂದ ಉಮೇಶ್ ಕೃಷ್ಣನಗರ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12 ರಿಂದ ಎಸ್.ಎಲ್.ವಿ.ಟಿ ಭಜಕ ವೃಂದ ಪುತ್ತೂರು ಇವರಿಂದ ಭಜನೆ, ಮಧ್ಯಾಹ್ನ 1 ರಿಂದ ಸುಭದ್ರಾ ಭಜನಾ ಮಂಡಳಿ, ಮುಕ್ರಂಪಾಡಿ ಇವರಿಂದ ಭಜನೆ, ಸಂಜೆ 6 ರಿಂದ ಚಂದ್ರಶೇಖರ ಮೂಡಾಯೂರು ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 7ರಿಂದ ಗಾನಸಿರಿ ಡಾ| ಕಿರಣ್ ಕುಮಾರ್ ಮತ್ತು ಬಳಗದಿಂದ ಭಜನ್ ಸಂಧ್ಯಾ ನಡೆಯಲಿದೆ.

ಸೆ.3ರಂದು ಬೆಳಗ್ಗೆ 11 ರಿಂದ ವೈಷ್ಣವಿ ವೈದೇಹಿ ಭಜನಾ ಮಂಡಳಿ, ಪುತ್ತೂರು ಇವರಿಂದ ಭಜನೆ ಸಂಜೆ 5ರಿಂದ ವಜ್ರಮಾತಾ ಮಹಿಳಾ ಭಜನಾ ಮಂಡಳಿ, ಪುತ್ತೂರು ಇವರಿಂದ ಭಜನೆ, ಸಂಜೆ 6ರಿಂದ ಪದ್ಮನಾಭ ಅರಿಯಡ್ಕ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 7ರಿಂದ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ ದೀಪಕ್ ರೈ ಪಾಣಾಜೆ ಅಭಿನಯದ ತುಳು ಹಾಸ್ಯ ನಾಟಕ -ನಿತ್ಯೆ ಬನ್ನಗ ಪ್ರದರ್ಶನ ನಡೆಯಲಿದೆ.

ಸೆ.4. ರಂದು ಮಧ್ಯಾಹ್ನ 12ರಿಂದ ದಾಮೋದರ ಪಿ.ಕೆ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 1ರಿಂದ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನೆ ಸಂಜೆ 6ರಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪುತ್ತೂರು ಪಿ.ಕೆ.ಗಣೇಶ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 7.00ರಿಂದ ಅಮ್ಮ ಕಲಾವಿದೆರ್, ಕುಡ್ಲ, ಇವರ – ಸುಂದರ ರೈ ಮಂದಾರ ಅಭಿನಯದ ತುಳು ಹಾಸ್ಯ ನಾಟಕ – ಅಲೇ…! ಬುಡಿಯೆರ್ ಗೆ..!! ನಡೆಯಲಿದೆ.

ಸೆ.5 ರಂದು ಬೆಳಗ್ಗೆ 11.30 ರಿಂದ ಶ್ರೀ ಲಕ್ಷ್ಮೀವೆಂಕಟ್ರಮಣ ಮಹಿಳಾ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನೆ, ಸಂಜೆ 5.30 ರಿಂದ ಧಾರ್ಮಿಕ ಸಭೆ, ರಾತ್ರಿ 7.00 ರಿಂದ ದಿನೇಶ್ ಕೋಡಪದವು ಇವರ ತಂಡದಿಂದ ಯಕ್ಷಗಾನ ಹಾಸ್ಯ ವೈಭವ ತೆಲಿಕೆದ ತೇಟ್ಲ ನಡೆಯಲಿದೆ.

ಸೆ.6 ರಂದು ಬೆಳಗ್ಗೆ 11 ರಿಂದ 108 ಕಾಯಿ ಗಣಪತಿಹೋಮ, ಮಧ್ಯಾಹ್ನ 1 ರಿಂದ ದೇವರ ಉತ್ಸವ, ಮಧ್ಯಾಹ್ನ 2 ರಿಂದ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದೊಂದಿಗೆ ನಡೆದುಬಂದ ‘ಬಾರಿಸು ಕನ್ನಡ ಡಿಂಡಿಮವ’ ತಂಡದಿಂದ ಹಾಡು ಮತ್ತು ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ಕೋಲ, ರಾತ್ರಿ 7 ರಿಂದ ಸುಡುಮದ್ದು ಪ್ರದರ್ಶನ ನಡೆದು ಶೋಭಾಯಾತ್ರೆ ನಡೆಯಲಿದೆ ಎಂದು ಎನ್. ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here