ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಲಮನ್ನಾ ವಂಚಿತ ಸದಸ್ಯರ ಸಭೆ

0

  • ಬಾಕಿಯಿರುವ ಸಾಲಮನ್ನಾದ ಮೊತ್ತ ಶೀಘ್ರ ಬಿಡುಗಡೆ  ಶಾಸಕರಿಗೆ ಮತ್ತೊಮ್ಮೆ ಮನವಿಗೆ ನಿರ್ದಾರ

ಪುತ್ತೂರು:ಕರ್ನಾಟಕ ಸರಕಾರದ ಸಾಲಮನ್ನಾ ಯೋಜನೆ 2018 ರಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಲಗಾರ ರೈತರ ಪೈಕಿ 43 ಮಂದಿ ಸದಸ್ಯರಿಗೆ ಈ ವರೆಗೆ ಸಾಲ ಮನ್ನಾವಾಗದೆ ವಂಚಿತರಾಗಿದ್ದಾರೆ. ಈ ಬಗ್ಗೆ ಸಾಲಮನ್ನಾ ವಂಚಿತ ಸದಸ್ಯರ ಸಭೆಯು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅದ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ರವರ ಅದ್ಯಕ್ಷತೆಯಲ್ಲಿ ಜರಗಿ ಮುಂದಿನ ರೂಪು ರೇಷೆಗಳ ಬಗ್ಗೆ ಚರ್ಚಿಸಿದರು.

ಸಾಲ ಮನ್ನಾ ವಂಚಿತರ ಪೈಕಿ ಜಯಪ್ರಕಾಶ್ ಬದಿನಾರ್, ವಿಕ್ರಂ ರೈ ಅಂತರ ಹಾಗೂ ಜಗನ್ನಾಥ ಸಹಿತ ಹಲವಾರು ಮಂದಿ ಈ ಬಗ್ಗೆ ಪ್ರಸ್ತಾಪಿಸಿ ಕಳೆದ ಮೂರು ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ಮಂಜುರಾದ ಸಾಲಮನ್ನಾ ಬಿಡುಗಡೆ ಆಗಿರುವುದಿಲ್ಲ. 1009 ಸದಸ್ಯರ ಪೈಕಿ 43 ಮಂದಿಗೆ ಮಾತ್ರ ಸಾಲಮನ್ನಾದ ಮೊಬಲಗು ಬಾರದೆ ವಂಚಿತರಾಗಿದ್ದಾರೆ. ತಕ್ಷಣ ಈ ಬಗ್ಗೆ ಆಡಳಿತ ಮಂಡಳಿ ಕಾರ್ಯ ಪ್ರವರ್ತರಾಗಬೇಕೆಂದು ಒತ್ತಾಯಿಸಿದರು. ಇಲ್ಲವೇ ಕಾನೂನು ಹೋರಾಟ ಅಥವಾ ಧರಣಿ ಅಥವಾ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳಲು ಆಡಳಿತ ಮಂಡಳಿ ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಅದ್ಯಕ್ಷ ಪಂಜಿಗುಡ್ಡೆ ಈಶ್ವರಭಟ್‌ರವರು ಮಾತನಾಡಿ, ಬಾಕಿ ಇರುವ 43 ಮಂದಿ ಅರ್ಹ ಫಲಾನುಭವಿಗಳಿಗೆ ಸಾಲಮನ್ನಾದ ಮೊಬಲಗು ಬಾರದೆ ಇರುವುದು ನಮಗೂ ಬೇಸರವಿದೆ. ಇದಕ್ಕಾಗಿ ಸಂಘದ ವತಿಯಿಂದ ಈಗಾಗಲೇ ಸಂಭಂದಪಟ್ಟವರ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ. ಮಾತ್ರವಲ್ಲದೆ ಪುತ್ತೂರು ಶಾಸಕರ ಮೂಲಕ ಮೂರು ಬಾರಿ ಸಂಘದ ವತಿಯಿಂದ ಮನವಿ ಸಲ್ಲಿಸಿ ಸರಕಾರಕ್ಕೆ ಕೇಳಿಕೊಳ್ಳಲಾಗಿದೆ. ನಮ್ಮ ಸಂಘದ ವತಿಯಿಂದ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಂಘದ ಸದಸ್ಯರ ಸಾಲಮನ್ನಾದ ಮೊಬಲಗು ಸಿಗುವವರೆಗೆ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು. ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪುರವರು ಮಾತನಾಡಿ, ಪುತ್ತೂರು ಶಾಸಕರಿಗೆ ಎರಡು ಮೂರು ಬಾರಿ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಗಿದೆ. ಅವರು ಸಂಭದಪಟ್ಟ ಸಚಿವರಲ್ಲಿ ಮಾತನಾಡಿ ಶೀಘ್ರವಾಗಿ ಬಾಕಿ ಇರುವ ಫಲಾನುಭವಿಗಳ ಸಾಲಮನ್ನಾದ ಮೊಬಲಗನ್ನು ಬಿಡುಗಡೆಮಾಡುವಂತೆ ಒತ್ತಾಯಿಸಿದ್ದಾರೆ. ಅತೀ ಶೀಘ್ರವಾಗಿ ಎಲ್ಲರಿಗೂ ಸಾಲಮನ್ನಾದ ಮೊಬಲಗು ದೊರೆಯಲಿದೆ ಎಂದರು.

ಶಾಸಕರಿಗೆ ಮತ್ತೊಮ್ಮೆ ಮನವಿಗೆ ನಿರ್ದಾರ:
ಸಂಘದಲ್ಲಿರುವ ಸಾಲಗಾರ ರೈತರಾದ 43 ಮಂದಿಗೆ ಸಾಲಮನ್ನಾದ ಸೌಲಭ್ಯ ದೊರೆಯದೇ ಇರುವುದರಿಂದ ತಕ್ಷಣ ಬಾಕಿಯಿರುವ ಮೊಬಲಗನ್ನು ಬಿಡುಗಡೆಗೊಳಿಸುವಂತೆ 43 ಫಲಾನುಭವಿಗಳ ಸಹಿಯೊಂದಿಗೆ ಅಡಳಿತ ಮಂಡಳಿಯು ಮತ್ತೊಮ್ಮೆ ಪುತ್ತೂರು ಶಾಸಕರಿಗೆ ಮನವಿ ನೀಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ನಾಯವಾದಿ ದೇವಾನಂದ, ಸುಬ್ರಹ್ಮಣ್ಯ ಗೌಡ ಹನಿಯೂರು, ಜಯಲಕ್ಷ್ಮಿಸುರೇಶ್, ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಸ್ವಾಗತಿಸಿ, ವ್ಯವಸ್ಥಾಪಕಿ ರಾಧ ಬಿ.ರೈ ವಂದಿಸಿದರು.

LEAVE A REPLY

Please enter your comment!
Please enter your name here