ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸನ್ನಿಧಿ ಭಂಡಾರಿ ಪ್ರಥಮ

0

 

ಪುತ್ತೂರು: ಪರ್ಲಡ್ಕ ಬಾಲವನದ ಈಜುಕೊಳದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಇಂಟರ್ ಕ್ಲಬ್ ಈಜು ಸ್ಪರ್ಧೆಯಲ್ಲಿ ಸನ್ನಿಧಿ ಪಿ.‌ಭಂಡಾರಿ ಅವರು 25 ಮೀಟರ್ ಫ್ರೀಸ್ಟೈಲ್ ಕಿಕ್ ವಿತ್ ಬೋರ್ಡಲ್ಲಿ ಪ್ರಥಮ, 25 ಮೀಟರ್ ಡೋಲ್ಫಿನ್ ಕಿಕ್ ವಿತ್ ಬೋರ್ಡಲ್ಲಿ ಪ್ರಥಮ, 25 ಮೀಟರ್ ಫ್ರೀಸ್ಟೈಲಲ್ಲಿ ದ್ವಿತೀಯ, 4*25 ಮೀಟರ್ 1m KKನಲ್ಲಿ ದ್ವಿತೀಯ ಮತ್ತು 4*50 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವೀ ವನ್ ಆಕ್ವಾ ಸೆಂಟರ್ ಆಯೋಜಿಸಿದ್ದ ರಾಜ್ಯ ಮಟ್ಟದ ಈಜು ಸ್ಪರ್ಧೆಯ 100 ಮೀಟರ್ ಕೀ ಸ್ಟೈಲ್ ಈವೆಂಟಲ್ಲಿ ತೃತೀಯ ಮತ್ತು 50 ಮೀಟರ್ ಬ್ರೀತ್ ಸ್ಟ್ರೋಕ್ ಈವೆಂಟಲ್ಲಿ ತೃತೀಯ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದ ಸನ್ನಿಧಿ ಭಂಡಾರಿಯವರು ಈ ಎರಡೂ ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಪ್ರತಿನಿಧಿಸಿದ್ದರು.‌
ಮಂಗಳೂರಿನ ಉದ್ಯಮಿ ಪ್ರದೀಪ್ ಭಂಡಾರಿ ಮತ್ತು ಶ್ವೇತಾ ಪಿ. ಭಂಡಾರಿಯವರ ಪುತ್ರಿಯಾಗಿರುವ ಸನ್ನಿಧಿ ಅವರು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ಸನ್ನಿಧಿಯವರ ತಾಯಿ ಶ್ವೇತಾ ಪಿ.‌ಭಂಡಾರಿರವರು ಬೆಳ್ಳಿಪ್ಪಾಡಿ ಕೈಪ ನಿವಾಸಿ ಸೀತಾರಾಮ ಶೆಟ್ಟಿಯವರ ಪುತ್ರಿ.‌

LEAVE A REPLY

Please enter your comment!
Please enter your name here