ತೆಂಗಿನ ಮರ ಬಿದ್ದು ಮನೆಗೆ ಹಾನಿ

0

ಉಪ್ಪಿನಂಗಡಿ: ಗಾಳಿಗೆ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯು ಭಾಗಶಃ ಹಾನಿಗೀಡಾದ ಘಟನೆ 34 ನೆಕ್ಕಿಲಾಡಿಯ ದರ್ಬೆ ಎಂಬಲ್ಲಿ ಆ.31ರಂದು ನಡೆದಿದೆ.

ನಿನ್ನೆ ಸಂಜೆ ಈ ಭಾಗದಲ್ಲಿ ಮಳೆಯೊಂದಿಗೆ ಜೋರು ಗಾಳಿ ಬೀಸಿದ್ದು, ಇಲ್ಲಿನ ದರ್ಬೆ ನಿವಾಸಿ ಸುರೇಶ್ ನಾಯ್ಕ ಎಂಬವರ ಮನೆಯ ಹಿತ್ತಲಿನಲ್ಲಿದ್ದ ತೆಂಗಿನ ಮರ ಬುಡ ಸಮೇತ ಮನೆಯ ಮೇಲೆಯೇ ಮಗುಚಿ ಬಿದ್ದಿದೆ. ಇದರಿಂದ ಮನೆಯ ಮೇಲ್ಚಾವಣಿ ಹಾಗೂ ಮನೆಯ ಎದುರು ಹಾಕಲಾಗಿದ್ದ ಸಿಮೆಂಟ್ ಶೀಟ್‌ಗೆ ಹಾನಿಯಾಗಿದ್ದು, ಸುಮಾರು 50 ಸಾವಿರಕ್ಕಿಂತಲೂ ಅಧಿಕ ನಷ್ಟ ಸಂಭವಿಸಿದೆ. ಘಟನೆಯ ಸಂದರ್ಭ ಮನೆ ಮಂದಿ ಮನೆಯೊಳಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here