ಅಮ್ಚಿನಡ್ಕದಲ್ಲಿ ಸಾರ್ವಜನಿಕ ಗಣೇಶೋತ್ಸವ , ಹಿರಿಯ ನಾಗರಿಕರಿಗೆ ಸನ್ಮಾನ

0

  • ಹಬ್ಬಗಳು ಊರಿನ ಸೌಹಾರ್ಧತೆಯನ್ನು ಗಟ್ಟಿಗೊಳಿಸಬೇಕು; ಹೇಮನಾಥ ಶೆಟ್ಟಿ

ಪುತ್ತೂರು; ಯಾವುದೇ ಧರ್ಮದ ಹಚ್ಚ ಆಚರಣೆಗಳಿರಲಿ ಅವುಗಳು ಊರಿನಲ್ಲಿ ಶಾಂತಿ, ಸೌಹಾರ್ಧತೆಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮವಾಗಬೇಕು ಇದಕ್ಕಾಗಿ ಸಮಾಜದ ಪ್ರತೀಯೊಬ್ಬರೂ ಪಣ ತೊಡಬೇಕಿದೆ ಎಂದು ಅಮ್ಚಿನಡ್ಕ ನಾಗರಿಕ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಕಾವು ಅಮ್ಚಿನಡ್ಕ ನಾಗರಿಕ ಸೇವಾ ಸಮಿತಿ, ಶ್ರೀಗಣೇಶೋತ್ಸವ ಸಮಿತಿ ಹಾಗೂ ಗಣೇಶ ಕಲಾ ಸಮಿತಿ ಕಾವು ಅಮ್ಚಿನಡ್ಕ ಇದರ ಆಶ್ರಯದಲ್ಲಿ ಆ. ೩೧ ರಂದು ನಡೆದ ಅಮ್ಚಿನಡ್ಕ ವಿನಾಯಕ ನಗರದಲ್ಲಿ ನಡೆದ ೩೫ ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮ್ಚಿನಡ್ಕದಲ್ಲಿ ೩೫ ವರ್ಷದ ಹಿಂದೆ ರವಿಶಂಕರ್ ಕಲ್ಲೂರಾಯವರು ಗಣೇಶನ ಚಿತ್ರ ಇಟ್ಟು ಹಬ್ಬ ಆಚರಿಸುವ ಮೂಲಕ ಆರಂಭ ಮಾಡಿದ್ದರು. ಆ ಬಳಿಕ ಇಂದು ವಿಜೃಂಬಣೆಯಿಂದ ಗಣೇಶೋತ್ಸವ ನಡೆಯುತ್ತಿದೆ. ಪ್ರತೀಯೊಂದು ಘಟನೆಗಳ ಹಿಂದೆ ಊರಿನ ಹಿರಿಯರ ಶ್ರಮ ಇದ್ದೇ ಇರುತ್ತದೆ. ದೇಶದ ಸ್ವಾತಂತ್ರ್ಯ ಸಮರದ ಸಮಯದಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಗಣೇಶೋತ್ಸವ ಆರಂಭಗೊಂಡಿತ್ತು ಇವತ್ತು ದೇಶದ ಜನತೆಯನ್ನು ಒಂದುಗೂಡಿಸಲು ಹಬ್ಬಗಳು ಸಹಕಾರಿಯಾಗಬೇಕಿದೆ. ಪ್ರತೀಯೊಂದು ಕಡೆಯೂ ಶಾಂತಿ, ಸೌಹಾರ್ಧತೆ ನೆಲಯೂರಲು ಎಲ್ಲಾ ಹಬ್ಬಗಳು ಸಹಕಾರಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯವಾದಿ ಗಿರೀಶ್‌ಮಳಿಯವರು ಇಂದು ಅಮ್ಚಿನಡ್ಕದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ, ಜಾತಿಯ ಬಂಧುಗಳು ಸೇರಿದ್ದಾರೆ ಇದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ. ನಾವು ಜಾತಿ, ಮತಗಳ ಬೇದವನ್ನು ಹಿರಗಿಟ್ಟು ಐಕ್ಯತೆಯಿಂದ ಬಾಳಿ ಬದುಕಬೇಕಿದೆ ಎಂಬುದನ್ನು ಹಬ್ಬಗಳು ಸಾರಿ ಹೇಳುತ್ತದೆ. ಪ್ರತೀಯೊಂದು ಹಬ್ಬಗಳೂ ಸಮುದಾಯಗಳ ನಡುವೆ ಸಾಮರಸ್ಯವನ್ನು ಸೃಷ್ಟಿಸಲಿ ಎಂದು ಹೇಳಿದರು.

ರವಿಶಂಕರ್ ಕಲ್ಲೂರಾಯವರು ಮಾತನಾಡಿ ೩೫ ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಾವು ಗಣೇಶ ಹಬ್ಬವನ್ನು ಸ್ಥಾಪನೆ ಮಾಡಿದ್ದು ಅದು ಪರತೀ ವರ್ಷವೂ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು. ಪುತ್ತೂರು ಪುರಸಭೆಯ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ದೇಶದ ಜನತೆಯನ್ನು ಒಗ್ಗೂಡಿಸಲು ಬಾಲಗಂಗಾಧರನಾಥ ತಿಲಕರು ಅಂದು ಹುಟ್ಟು ಹಾಕಿದ್ದ ಗಣೇಶ ಹಬ್ಬ ಇಂದು ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ಹಬ್ಬಗಳು ನಮ್ಮೆಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿರುವುದು ಮತ್ತು ಅಮ್ಚಿನಡ್ಕದಲ್ಲಿ ನಡೆದ ಗಣೇಶ ಹಬ್ಬದಲ್ಲಿ ಎಲ್ಲಾ ಧರ್ಮದವರೂ ಭಾಗವಹಿಸುತ್ತಿರುವುದು ಅಬಿನಂದನಾರ್ಹ ಇದು ಹೀಗೆಯೇ ಸದಾ ಕಾಲ ಮುಂದುವರೆಯಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ರಾವ್ ನಿಧಿಮುಂಡ, ಕಾವು ಪಂಚಲಿಂಗೆಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂಧ್ರ ಭಟ್ ಮಳಿ,ವಸಂತ ಗೌಡ, ಕುಶಾಲಪ್ಪ ಗೌಡ, ಸೇಸಪ್ಪ ಗೌಡ ನೀರ್ಕಜೆ ಮತ್ತಿತರರು ಉಪಸ್ಥಿತರಿದ್ದರು.

ನಾಗರಿಕ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಕಾವು ದಿವ್ಯನಾಥ ಶೆಟ್ಟಿಯವರು ಪ್ರಸ್ತಾವಿಕ ಮಾತುಗಳನ್ನಾಡಿ ಅಮ್ಚಿನಡ್ಕದಲ್ಲಿ ನಡೆದು ಬಂದ ಗಣೇಶೋತ್ಸವ ಮತ್ತು ಇದಕ್ಕಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಿರಿಯ ನಾಗರಿಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಕಾವು ಅಮ್ಚಿನಡ್ಕ ಪರಿಸರದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯರಾದ ನಾರಾಯಣ ಭಟ್ ಮಳಿ, ದಿನೇಶ್ ಗೌಡ ಅಮ್ಮಿನಡ್ಕ ದಯಾನಂದ ರೈ ಮುದರ್ ಪಳ್ಳ, ಅಮ್ಮು ರೈ ಅಂಕೊತ್ತಿಮಾರ್, ವಸಂತ ಗೌಡ ಆನಡ್ಕ, ಮಿಂಗಲ್ ಡಿ.ಸೋಜ ಅಮ್ಮಿನಡ್ಕ, ಬಾಲಕೃಷ್ಣ ಗೌಡ (ಪುಟ್ಟಣ್ಣ) ಕಂಟ್ರಿಮಜಲು, ಅಂಬೋಡಿ ಅಮ್ಮಿನಡ್ಕ, ಪದ್ಮನಾಭ ಆಚಾರ್ಯ ಮುರಳಿ ನಿವಾಸ, ಬಟ್ಯಪ್ಪ ಕಲಾಲ್ ಬಿಂತೋಡಿ, ಕೆ.ಜೆ ಕೇಶವ ಅಮ್ಮಿನಡ್ಕ,ರಾಜು ಅಮ್ಮಿನಡ್ಕ, ಬಾಬು ಅಮ್ಮಿನಡ್ಕ, ಸಂಕಪ್ಪ ಕಲಾಲ್ ಬಿಂತೋಡಿ,ಅಬ್ದುಲ್ ಕುಂಞ ಮುಖಾರಿ ಮೂಲೆ, ಕುಂಞ ಮಮ್ಮದ್ ಮುಖಾರಿ ಮೂಲೆ, ಕೊರಗಪ್ಪ ಉಜುಗುಳಿಯವರನ್ನು ಶಾಲು ಹೊದಿಸಿ, ಫಲಪುಷ್ಪಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿ ವೇತನ ವಿತರಣೆ
ಕಾವು ಅಮ್ಚಿನಡ್ಕ ಪರಿಸರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ತಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶ್ರೀ ಕೃಷ್ಣಾಷ್ಟಮಿ ಮತ್ತು ಗಣೇಶೋತ್ಸವ ಹಬ್ಬದ ಪ್ರಯುಕ್ತ ಅಂಗನವಾಡಿ ಪಟಾನಿಗಳಿಗೆ, ಪ್ರಾಥಮಿಕ , ಪ್ರೌಢ , ಕಾಲೇಜಿ ಹಾಗೂ ಸ್ಥಳೀಯರಿಗೆ ನಡೆದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ದೇವಣ್ಣ ರೈ ವಂದಿಸಿದರು. ಸಮಿತಿಯ ಕಾರ್ಯದರ್ಶಿಗಳಾದ ಜಯಪ್ರಕಾಶ್ ಗೌಡ, ಪವನ್‌ಕುಮಾರ್, ಕೋಶಾಧಿಕಾರಿ ನಾರಾಯಣ ಗೌಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಚಂಧ್ರ ಕುಂಠಿಕಾನ ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here