ಸವಣೂರಿನಲ್ಲಿ 40ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸವಣೂರು ಇದರ ಆಶ್ರಯದಲ್ಲಿ 40 ನೇ ವರುಷದ ಸಾರ್ವಜನಿಕ ಗಣೇಶೋತ್ಸವ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಆ.31 ರಂದು ಆರಂಭಗೊಂಡಿತು. ಆ.31ರಂದು ಪುರೋಹಿತ ಅನಂತರಾಮ ಉಪಾಧ್ಯಾಯರ ನೇತೃತ್ವದಲ್ಲಿ ಗಣೇಶನ ಬಿಂಬಪ್ರತಿಷ್ಠಾಪನೆ, ಗಣಪತಿ ಹೋಮ ನಡೆಯಿತು. ಬಳಿಕ ಭಜನಾ ಕಾರ್‍ಯಕ್ರಮ, ಭಕ್ತಿ ರಸಮಂಜರಿ, ಮಧ್ಯಾಹ್ನ ಅನ್ಸಂತರ್ಪಣೆ, ಸಂಜೆ ತಾಳಮದ್ದಳೆ, ಸಾಂಸ್ಕೃತಿಕ ಕಾರ್‍ಯಕ್ರಮ, ಭರತನಾಟ್ಯ ನಡೆಯಿತು. ಸೆ. 1ರಂದು ಗಣಹೋಮ, ಭಜನೆ, ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷ ಶಿವರಾಮ ಗೌಡ ಮೆದು, ಉಪಾಧ್ಯಕ್ಷ ರಾಘವ ಗೌಡ ಸವಣೂರು, ಕಾರರ್‍ಯದರ್ಶಿ ಸುಧಾಕರ ರೈ ದೇವಸ್ಯ, ಜೊತೆ ಕಾರ್‍ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಾಧಿಕಾರಿ ರಾಮಕೃಷ್ಣ ಪ್ರಭು ಮತ್ತು ಸಮಿತಿಯ ಸದಸ್ಯರುಗಳು ಹಾಗೂ ಊರವರು ಭಾಗವಹಿಸಿದರು.

  • ಸೆ. 2- ಸಭಾ ಕಾರ್‍ಯಕ್ರಮ- ಶ್ರೀ ವಿಘ್ನೇಶ್ವರನ ಮೆರವಣಿಗೆ
  • ಸೆ. 2 ರಂದು ಬೆಳಿಗ್ಗೆ ಗಣಹೋಮ, ಭಜನೆ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆದ ಬಳಿಕ ಸಭಾ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು ವಹಿಸಲಿದ್ದಾರೆ. ಪ್ರಾಧ್ಯಾಪಕ ಡಾ| ರಾಜೇಶ್ ಬೆಜ್ಜಂಗಳರವರು ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈಯವರಿಗೆ ಸನ್ಮಾನ ನಡೆಯಲಿದೆ. ಸಂಜೆ ಶ್ರೀ ವಿಘ್ನೇಶ್ವರನ ಮೆರವಣಿಗೆ ನಡೆದು ಸರ್ವೆ ಗೌರಿ ಹೊಳೆಯಲ್ಲಿ ವಿಸರ್ಜನೆ ನಡೆಯಲಿದೆ.

LEAVE A REPLY

Please enter your comment!
Please enter your name here